dcsimg
Image of Sholiga narrow-mouthed frog
Life » » Animals » » Vertebrates » » Amphibians » Frogs And Toads » Microhylid Frogs »

Sholiga Narrow Mouthed Frog

Microhyla sholigari Dutta & Ray 2000

ಮೈಕ್ರೊಹೈಲಾ ಶೋಲಿಗರಿ ( Kannada )

provided by wikipedia emerging languages

ಮೈಕ್ರೊಹೈಲ ಶೋಲಿಗರಿ ಅಥವಾ ಶೋಲಿಗ ಸಣ್ಣ ಬಾಯಿಯ ಕಪ್ಪೆ ಪ್ರಬೇಧ ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಮೈಕ್ರೊಹೈಲಿಡೆ ಎಂಬ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಕಪ್ಪೆ . ಈ ಕಪ್ಪೆ ಕರ್ನಾಟಕದ ಚಾಮರಾಜನಗರ ಜಿಲ್ಲೆಬಿಳಿಗಿರಿರಂಗನ ಬೆಟ್ಟದಲ್ಲಿ ಮೊದಲನೆಯದಾಗಿ ಪತ್ತೆಯಾಯಿತು. ಈ ಬೆಟ್ಟಗಳಲ್ಲಿನ ಮತ್ತು ಸುತ್ತಲಿನ ಕಾಡಿನಲ್ಲಿ ವಾಸಿಸುವ ಸೋಲಿಗ ಬುಡಕಟ್ಟು ಜನರ ಹೆಸರನ್ನು ಈ ಕಪ್ಪೆಗೆ ಇಡಲಾಗಿದೆ. [೧] ಈ ಕಪ್ಪೆ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮೊದಲನೆಯದಾಗಿ ಭಾವಿಸಲಾಗಿತ್ತು ಮತ್ತು ಕೇರಳದ ಕೆಲವೊಂದು ಪ್ರದೇಶ ಮತ್ತು ಇನ್ನೊಂದು ಸ್ಥಳದಲ್ಲಿ ಮಾತ್ರ ಕಂಡುಬಂದಿತ್ತು ಮತ್ತು ಇದು ಅಪಾಯಕ್ಕೊಳಗಾದ ಪ್ರಬೇಧಕ್ಕೆ ಸೇರಿಸಲಾಗಿದೆ. [೨] ಇತ್ತೀಚೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ಇವುಗಳು ಪಶ್ಚಿಮ ಘಟ್ಟದ ೧೫ ಪ್ರದೇಶಗಳಲ್ಲಿ ಮತ್ತು ಬೆಂಗಳೂರಿನ ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿಯೂ ಕಂಡು ಬಂದಿತ್ತು. [೩] ಈ ಅಧ್ಯಯನಕ್ಕೆ ಪೂರಕವಾಗಿ ಫೋಟೊ, ಧ್ವನಿ ಮುದ್ರಣಗಳನ್ನು ಒದಗಿಸಿ IUCNನ ಅಪಾಯಕಾರಿ ಜೀವಿಗಳ ಪಟ್ಟಿಯಿಂದ ಇದನ್ನು ತೆಗೆದು ಸಾಮಾನ್ಯ ಜೀವಿಯ ಪಟ್ಟಿಗೆ ಸೇರಿಸಬೇಕೆಂದು ವಿನಂತಿಸಲಾಗಿದೆ. [೩]

ವಿವರಣೆ

ಮೈಕ್ರೊಹೈಲ್ ಶೊಲಿಗರಿ ಎಂಬುದು ಸಣ್ಣ ಗಾತ್ರದ ಕಪ್ಪೆಯಾಗಿದ್ದು, ಪೂರ್ಣ ಬಲಿತ ಗಂಡು ಕಪ್ಪೆಯ ಗಾತ್ರ ಸುಮಾರು 15.9–16.2 mm (N = 3) ಮತ್ತು ಹೆಣ್ಣು ಕಪ್ಪೆಯು 16.5–19.2 mm (N = 4) ಇರುತ್ತದೆ. ಈ ಜಾತಿಗಳ ಕಪ್ಪೆಗಳು ಮೂಗು ಮತ್ತು ಮೂಗಿನ ಬದಿ ಚೂಪಾಗಿರುತ್ತದೆ. ಮುಂಭಾಗದ ದವಡೆಯ ಹೊರಭಾಗದಲ್ಲಿ ಮುಂಭಾಗದ ನೋಟದಲ್ಲಿ ಚೂಪಾದಂತೆ ಕಂಡುಬರುತ್ತದೆ. ಕಿವಿಯು ಅಸ್ಪಷ್ಟವಾಗಿದೆ. ತಲೆಯ ಉದ್ದವು ಹೆಚ್ಚು ಅಗಲವಾಗಿರುತ್ತದೆ ಮತ್ತು ಗಂಟಲು ಚೀಲ ಮಾಸಿದ ಹಳದಿ ಬಣ್ಣದಲ್ಲಿದೆ. ಕಾಲ್ಬೆರಳುಗಳ ನಡುವೆ ಅರ್ಧ (ಪೂರ್ಣ ಪ್ರಮಾಣದ್ದಲ್ಲದ) ಜಾಲಪಾದಗಳನ್ನು ಹೊಂದಿರಿವಿದಿಲ್ಲ. ಚರ್ಮವು ನುಣುಪಾಗಿದ್ದು ಚರ್ಮದಲ್ಲಿ ಸಾಂದ್ರತೆ ಹೆಚ್ಚಾಗಿರುತತ್ತದೆ. ಮೇಲ್ಬಾಗದ ಚರ್ಮದ ಬಣ್ಣವು ಮಸುಕಾದ ಕೆಂಪು ಬಣ್ಣದಿಂದ ಕೂಡಿದೆ. ಕಪ್ಪು ಬಣ್ಣ ಮತ್ತು ಕಂದು ಬಣ್ಣದ ಬ್ಯಾಂಡ್ಗಳೊಂದಿಗೆ ಕಂದು ಬಣ್ಣವಿದೆ.

 src=
ಮೈಕ್ರೊಹೈಲ ಶೋಲಿಗರಿಯ ಮೇಲ್ಬಾಗದ ನೋಟ

ಕಣ್ಣಿನ ಬೊಂಬೆ ಕಂದು ಬಣ್ಣದಲ್ಲಿದ್ದು ಸದರ ಹೊರಗಿನ ಭಾಗ ಚಿನ್ನದ ಹಳದಿ ಬಣ್ಣದಲ್ಲಿದೆ. ಮೈಕ್ರೊಹೈಲ ಶೋಲಿಗರಿಯ ಕರೆಯು ತೀಕ್ಷ್ಣವಾದ 'ಝೀ ... ಝೀ ... .. ಝೀ ...' ಎಂದು ಕೇಳಿ ಬರುತ್ತದೆ ಮತ್ತು ಪ್ರತಿ ಕರೆ 0.76 ± 0.04 s (range: 0.65–0.81 s) ದೀರ್ಘಾವಾಗಿದೆ. 3596.08 ± 98.46 & nbsp; Hz (ವ್ಯಾಪ್ತಿ: 3375-3704) ಸರಾಸರಿ ಪ್ರಬಲ ಆವರ್ತನದೊಂದಿಗೆ ಕರೆಗಳಿಗೆ 52-67 ಬಡಿತಗಳು ಕಂಡುಬಂದಿವೆ. (ಸರಾಸರಿ ± ಎಸ್ಇ, 62.92 ± 3.86; ಎನ್ = 13) [೧][೩][೪]

 src=
ಮುಂಭಾಗದ ನೋಟ ಮೈ. ಶೋಲಿಗರಿ

ಪರಿಸರ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ

ಮೈಕ್ರೊಹೈಲ ಶೋಲಿಗರಿಯು ಸಾಮಾನ್ಯವಾಗಿ ಮಾನವನ ವಾಸಸ್ಥಳಗಳಗಳಲ್ಲಿ, ಕಾಡಿನ ತೆರೆದ ಪ್ರದೇಶಗಳಲ್ಲಿ ಮತ್ತು ಹಳ್ಳ ಕೊಳ್ಳಗಳ ಸುತ್ತಮುತ್ತಲಿನಲ್ಲಿ ಕಂಡುಬರುತ್ತವೆ. ಇವುಗಳು ನಿಶಾಚರಿಗಳಾಗಿದ್ದು ಜೂನ್ ತಿಂಗಳಿನಿಂದ ಒಕ್ಟೋಬರ್ ತಿಂಗಳಿನ ವರೆಗೂ ಸಂಜೆ ೬ ಗಂಟೆಯಿಂದ ರಾತ್ರಿ ೧೧ ಗಂಟೆಯ ವರೆಗೂ ಕೂಗುತ್ತಿರುತ್ತವೆ. ಸಂತಾನೋತ್ಪತ್ತಿಗಾಗಿ ಸಣ್ಣ ತೊರೆಗಳು ಮತ್ತು ಆಳವಿಲ್ಲದ ಕೊಳಗಳ ಸಸ್ಯಗಳನ್ನು ಬಳಸಿಕೊಳ್ಳುತ್ತವೆ. [೩] ಇವುಗಳಿಗೆ ಕಂಟಕವಾಗಿರುವುದು ನಗರೀಕರಣ ಮತ್ತು ಅವುಗಳ ವಾಸಕ್ಕೆ ಯೋಗ್ಯವಾದ ಸ್ಥಳಗಳ ನಾಶ. [೨]

ವಿತರಣೆ

ಮೈಕ್ರೊಹೈಲ ಶೋಲಿಗರಿ ದಕ್ಷಿಣ ಭಾರತದಲ್ಲಿ ಅನೇಕ ಪ್ರದೇಶದಲ್ಲಿ ಕಂಡುಬರುತ್ತದೆ. ಇವುಗಳು ಕರ್ನಾಟಕದ ಸುಮಾರು 28,304.6 ಚ.ಕಿ.ಮೀ. ಪ್ರದೇಶದಲ್ಲಿ ಕಂಡು ಬರುತ್ತವೆ. ಬಿಸ್ಲೆ, ಬಿಳಿಗಿರಿರಂಗನ ಬೆಟ್ಟ ಮುಂತಾದ ಸ್ಥಳಗಳಲ್ಲಿ ಕಂಡು ಬರುತ್ತವೆ.

ಉಲ್ಲೇಖಗಳು

  1. ೧.೦ ೧.೧ Dutta and Ray (2000). "Microhyla sholigari, a new species of microhylid frog (Anura: Microhylidae) from Karnataka, India". Hamadrayad. 25: 38–44.
  2. ೨.೦ ೨.೧ "Microhyla sholigari: S.D. Biju, Sushil Dutta, Gajanan Dasaramji Bhuddhe, Karthikeyan Vasudevan, Chelmala Srinivasulu". IUCN Red List of Threatened Species. 2004-04-30. doi:10.2305/iucn.uk.2004.rlts.t57893a11688938.en. Retrieved 2018-07-16.
  3. ೩.೦ ೩.೧ ೩.೨ ೩.೩ SESHADRI, KADABA SHAMANNA; PRITI, H.; RAVIKANTH, G.; VIDISHA, M. K.; VINEETH, K. K.; SINGAL, RAMIT; SARMA, R. R.; ARAVIND, N. A.; GURURAJA, KOTAMBYLU VASUDEVA (2016-12-21). "Redescription and Range Extension of Microhyla sholigari Dutta & Ray (Amphibia: Anura: Microhylidae) from South West India". Zootaxa (in ಇಂಗ್ಲಿಷ್). 4208 (6). ISSN 1175-5334.
  4. Seshadri, K. S.; Singal, Ramit; Priti, H.; Ravikanth, G.; Vidisha, M. K.; Saurabh, S.; Pratik, M.; Gururaja, Kotambylu Vasudeva (2016-03-09). "Microhyla laterite sp. nov., A New Species of Microhyla Tschudi, 1838 (Amphibia: Anura: Microhylidae) from a Laterite Rock Formation in South West India". PLOS ONE (in ಇಂಗ್ಲಿಷ್). 11 (3): e0149727. doi:10.1371/journal.pone.0149727. ISSN 1932-6203. PMC 4784882. PMID 26960208.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಮೈಕ್ರೊಹೈಲಾ ಶೋಲಿಗರಿ: Brief Summary ( Kannada )

provided by wikipedia emerging languages

ಮೈಕ್ರೊಹೈಲ ಶೋಲಿಗರಿ ಅಥವಾ ಶೋಲಿಗ ಸಣ್ಣ ಬಾಯಿಯ ಕಪ್ಪೆ ಪ್ರಬೇಧ ದಕ್ಷಿಣ ಭಾರತದಲ್ಲಿ ಮಾತ್ರ ಕಂಡುಬರುವ ಮೈಕ್ರೊಹೈಲಿಡೆ ಎಂಬ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಕಪ್ಪೆ . ಈ ಕಪ್ಪೆ ಕರ್ನಾಟಕದ ಚಾಮರಾಜನಗರ ಜಿಲ್ಲೆಬಿಳಿಗಿರಿರಂಗನ ಬೆಟ್ಟದಲ್ಲಿ ಮೊದಲನೆಯದಾಗಿ ಪತ್ತೆಯಾಯಿತು. ಈ ಬೆಟ್ಟಗಳಲ್ಲಿನ ಮತ್ತು ಸುತ್ತಲಿನ ಕಾಡಿನಲ್ಲಿ ವಾಸಿಸುವ ಸೋಲಿಗ ಬುಡಕಟ್ಟು ಜನರ ಹೆಸರನ್ನು ಈ ಕಪ್ಪೆಗೆ ಇಡಲಾಗಿದೆ. ಈ ಕಪ್ಪೆ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮೊದಲನೆಯದಾಗಿ ಭಾವಿಸಲಾಗಿತ್ತು ಮತ್ತು ಕೇರಳದ ಕೆಲವೊಂದು ಪ್ರದೇಶ ಮತ್ತು ಇನ್ನೊಂದು ಸ್ಥಳದಲ್ಲಿ ಮಾತ್ರ ಕಂಡುಬಂದಿತ್ತು ಮತ್ತು ಇದು ಅಪಾಯಕ್ಕೊಳಗಾದ ಪ್ರಬೇಧಕ್ಕೆ ಸೇರಿಸಲಾಗಿದೆ. ಇತ್ತೀಚೆಗೆ ನಡೆಸಲಾದ ಸಮೀಕ್ಷೆಯ ಪ್ರಕಾರ ಇವುಗಳು ಪಶ್ಚಿಮ ಘಟ್ಟದ ೧೫ ಪ್ರದೇಶಗಳಲ್ಲಿ ಮತ್ತು ಬೆಂಗಳೂರಿನ ಭನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿಯೂ ಕಂಡು ಬಂದಿತ್ತು. ಈ ಅಧ್ಯಯನಕ್ಕೆ ಪೂರಕವಾಗಿ ಫೋಟೊ, ಧ್ವನಿ ಮುದ್ರಣಗಳನ್ನು ಒದಗಿಸಿ IUCNನ ಅಪಾಯಕಾರಿ ಜೀವಿಗಳ ಪಟ್ಟಿಯಿಂದ ಇದನ್ನು ತೆಗೆದು ಸಾಮಾನ್ಯ ಜೀವಿಯ ಪಟ್ಟಿಗೆ ಸೇರಿಸಬೇಕೆಂದು ವಿನಂತಿಸಲಾಗಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು