ಆಧುನಿಕ ಯುಗದ ಹುಲಿಗಳಲ್ಲಿ ೮ ಉಪತಳಿಗಳಿವೆ. ಇವುಗಳ ಪೈಕಿ ಎರಡು ಭೂಮಿಯಿಂದ ಮರೆಯಾಗಿವೆ. ಇಂದು ಜೀವಿಸಿರುವ ಉಪತಳಿಗಳೆಂದರೆ :
ಬಂಗಾಳ ಹುಲಿಗಳ ಒಂದು ಉಪಗುಂಪಾದ ಇವು ಹೊಳೆಯುವ ಚಿನ್ನದ ಮೈಬಣ್ಣವನ್ನು ಹೊಂದಿರುತ್ತವೆ. ಇವುಗಳ ಪಟ್ಟೆಯು ತಿಳಿ ಕಿತ್ತಳೆ ಬಣ್ಣದ್ದಾಗಿದ್ದು ತುಪ್ಪಳವು ಹೆಚ್ಚು ದಪ್ಪವಾಗಿರುತ್ತದೆ. ಇಂದು ಸುಮಾರು ೩೦ ಇಂತಹ ಹುಲಿಗಳು ಜೀವಿಸಿವೆ. ಇದಲ್ಲದೆ ನೀಲಿ ಬಣ್ಣದ ಹುಲಿ, ಕಪ್ಪು ಹುಲಿಗಳನ್ನು ಕಾಣಲಾಗಿರುವ ವದಂತಿಗಳಿವೆ. ಆದರೆ ಇವು ನಿಜವೇ ಆಗಿದ್ದಲ್ಲಿ ಇಂತಹ ಹುಲಿಗಳು ಸಾಮಾನ್ಯ ಹುಲಿಯ ವಂಶವಾಹಿಗಳ ವೈಪರೀತ್ಯದಿಂದ ಜನಿಸಿದ ಪ್ರಾಣಿಗಳಾಗಿದ್ದು ಸ್ವತಹ ಬೇರೆ ಉಪತಳಿಗಳಲ್ಲವೆಂದು ಅಭಿಪ್ರಾಯಪಡಲಾಗಿದೆ.
ಮುದಿಹುಲಿಗಳು ಮತ್ತು ತೀವ್ರ ಗಾಯಗೊಂಡು ಬೇಟೆಯಾಡಲು ಅಸಮರ್ಥವಾದ ಹುಲಿಗಳು ನರಭಕ್ಷಕವಾಗುತ್ತವೆ. ಭಾರತದಲ್ಲಿ ಈ ಸನ್ನಿವೇಶ ಸಾಮಾನ್ಯ.
ಬಿಳಿ ಸೈನಿಕನ ಮೇಲೆ ಎರಗುತ್ತಿರುವ ಹುಲಿ. ಈ ಬೊಂಬೆ ಟಿಪ್ಪು ಸುಲ್ತಾನನಿಗೆ ಸೇರಿತ್ತು.