dcsimg

ಕಳ್ಳಿ ಪೀರ ( Kannada )

provided by wikipedia emerging languages

ಕಳ್ಳಿ ಪೀರ'' (Small Bee-eater)ವನ್ನು ಸಂಸ್ಕೃತದಲ್ಲಿ "ಸಾರಂಗ" ತುಳು ಬಾಷೆಯಲ್ಲಿ "ತುಂಬೆ ಪಕ್ಕಿ" ಮುಂತಾಗಿ ಕರೆಯುತ್ತಾರೆ.ಗುಬ್ಬಚ್ಚಿಗಿಂತ ದೊಡ್ಡದು.ಹಸಿರು ಬಣ್ಣ. ಆಕಾಶದಲ್ಲಿ ಹಾರುವಾಗ ಜೇನು ಹುಳವನ್ನು ಹಿಡಿದು ತಿನ್ನುತ್ತದೆ.ಆಫ್ರಿಕದ ಉತ್ತರ ಭಾಗ,ಪಶ್ಚಿಮ ಅರೇಬಿಯಾ,ಭಾರತದಿಂದ ವಿಯೆಟ್ನಾಮ್ ವರೆಗಿನ ಏಷಿಯಾದ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ವೈಜ್ಞಾನಿಕ ಹೆಸರು

ಇದು ಮೀರಾಪಿಡೇ ಕುಟುಂಬಕ್ಕೆ ಸೇರಿದೆ. ಮೀರಾಪ್ಸ್ ಓರಿಯಂಟಾಲಿಸ್ ಎಂದು ಅಧಿಕೃತ ಹೆಸರು.

ಲಕ್ಷಣಗಳು

ಗೊರವಂಕ ಹಕ್ಕಿಗಿಂತ ಚಿಕ್ಕದು.ಮೈ ಹಸಿರು ಬಣ್ಣ ಹಾಗೂ ನೆತ್ತಿ ಕಂದು ಬಣ್ಣ.ಮೊನಚಾದ ಬಾಗಿದ ಕೊಕ್ಕು.ಬಾಲದ ಮದ್ಯದಿಂದ ಸೂಜಿಯಂತೆ ನೀಳವಾದ ಗರಿಗಳಿರುತ್ತವೆ.

ಆಹಾರ ಹಾಗೂ ಆವಾಸ

ಜೇನು ನೊಣ,ಸಣ್ಣ ಹುಳ ಹುಪ್ಪಟೆಗಳು,ಇರುವೆಗಳು ಮುಖ್ಯ ಆಹಾರ.ಜನವಸತಿ ಇರುವೆಡೆ ತಂತಿ ಇತ್ಯಾದಿ ಎತ್ತರದ ಪ್ರದೇಶದಲ್ಲಿ ಕುಳಿತುಕೊಳ್ಳುತ್ತದೆ. ಬಿಲಗಳಲ್ಲಿ ಗೂಡು.

ಬಾಹ್ಯ ಸಂಪರ್ಕ

Internet Bird Collection

ಆಧಾರ

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. BirdLife International (2008). Merops orientalis. In: IUCN 2008. IUCN Red List of Threatened Species. Retrieved 22 July 2009.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಕಳ್ಳಿ ಪೀರ: Brief Summary ( Kannada )