dcsimg

ಅರಮೀನು ( Kannada )

provided by wikipedia emerging languages

ಅರಮೀನು : ಬ್ಯಾಲಿಸ್ಟಿಡೀ ಕುಟುಂಬಕ್ಕೆ ಸೇರಿರುವ ಮಾನೊಕಾಂತಸ್ ಜಾತಿಯ ಮೀನುಗಳಿಗಿರುವ ಸಾಮಾನ್ಯ ಹೆಸರು (ಫೈಲ್ ಫಿಷ್)[೧]. ಇದೇ ಕುಟುಂಬದ ಬಾಲಿಸ್ಟಸ್ ಜಾತಿಯ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಕರೆಯಲಾಗುತ್ತದೆ. ಉಷ್ಣ ಮತ್ತು ಉಪೋಷ್ಣ ಸಮುದ್ರಗಳಲ್ಲಿ ಅಂದರೆ ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ ಮಹಾಸಾಗರದ ಉಷ್ಣವಲಯದ ಭಾಗಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ 60 ಸೆಂಮೀ ಉದ್ದ ಬೆಳೆಯುತ್ತವೆ. ಬಣ್ಣ ಹಳದಿ, ಕೆಂಪು ನೀಲಿ. ಬ್ಯಾಲಿಸ್ಟಿಡೀ ಕುಟುಂಬದ ಮೀನುಗಳಲ್ಲಿ ಬೆನ್ನುರೆಕ್ಕೆಯ ಮೊದಲನೆಯ ಮುಳ್ಳು ಸೆಟೆದು ನಿಲ್ಲಲು ಹಿಂದಿರುವ ಸಣ್ಣ ಮುಳ್ಳು ನೆರವಾಗುತ್ತದೆ (ಬಂದೂಕಿನ ಒತ್ತು ಗುಂಡಿಯಂತೆ). ಅದಕ್ಕಾಗಿಯೇ ಈ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಹೆಸರು. ಅರಮೀನುಗಳಲ್ಲಿ ಎರಡನೆಯ ಸಣ್ಣ ಮುಳ್ಳು ದೇಹದಲ್ಲಿ ಹುದುಗಿಹೋಗಿರಬಹುದು. ಇವು ಸಾಮಾನ್ಯವಾಗಿ ತೀರಕ್ಕೆ ಸಮೀಪದಲ್ಲಿ ಮಣ್ಣು ಅಥವಾ ಮರಳಿನಿಂದ ಕೂಡಿದ ತಳಗಳಲ್ಲಿ ಹವಳ, ಸ್ಪಾಂಜ್ ಮತು ಪಾಚಿಗಳ ಸಮೀಪದಲ್ಲಿ ವಾಸಿಸುತ್ತದೆ. ಇವೆರಡಕ್ಕೂ ಚೂಪಾದ, ಬಲವಾದ ಬಾಚಿಹಲ್ಲುಗಳಿವೆ. ಇವುಗಳಿಂದ ಹವಳದ ಚೂರುಗಳನ್ನು ಕಡಿದು ತಿನ್ನಲು, ಮೃದಂಗಿಗಳ ಚಿಪ್ಪನ್ನು ಒಡೆದು ಒಳಗಿನ ಮಾಂಸವನ್ನು ತಿನ್ನಲು ಸಾಧ್ಯವಾಗಿದೆ. ಈ ಕಾರಣದಿಂದ ಮುತ್ತಿನ ಮತ್ತು ಮುತ್ತಿನ ಚಿಪುಗಳ ವ್ಯವಸಾಯಕ್ಕೆ ಈ ಮೀನುಗಳಿಂದ ಹೆಚ್ಚು ನಷ್ಟ. ಈ ಗುಂಪಿನ ಕೆಲವು ಮೀನುಗಳ ಮಾಂಸ ವಿಷಪೂರಿತವಾದದ್ದು.

ಅರಮೀನಿನ ಚಿತ್ರ

ಅರಮೀನು

ಉಲ್ಲೇಖ

  1. http://txmarspecies.tamug.edu/fishdetails.cfm?scinameID=Stephanolepis%20hispidus
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಅರಮೀನು: Brief Summary ( Kannada )

provided by wikipedia emerging languages

ಅರಮೀನು : ಬ್ಯಾಲಿಸ್ಟಿಡೀ ಕುಟುಂಬಕ್ಕೆ ಸೇರಿರುವ ಮಾನೊಕಾಂತಸ್ ಜಾತಿಯ ಮೀನುಗಳಿಗಿರುವ ಸಾಮಾನ್ಯ ಹೆಸರು (ಫೈಲ್ ಫಿಷ್). ಇದೇ ಕುಟುಂಬದ ಬಾಲಿಸ್ಟಸ್ ಜಾತಿಯ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಕರೆಯಲಾಗುತ್ತದೆ. ಉಷ್ಣ ಮತ್ತು ಉಪೋಷ್ಣ ಸಮುದ್ರಗಳಲ್ಲಿ ಅಂದರೆ ಅಟ್ಲಾಂಟಿಕ್, ಪೆಸಿಫಿಕ್, ಹಿಂದೂ ಮಹಾಸಾಗರದ ಉಷ್ಣವಲಯದ ಭಾಗಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ 60 ಸೆಂಮೀ ಉದ್ದ ಬೆಳೆಯುತ್ತವೆ. ಬಣ್ಣ ಹಳದಿ, ಕೆಂಪು ನೀಲಿ. ಬ್ಯಾಲಿಸ್ಟಿಡೀ ಕುಟುಂಬದ ಮೀನುಗಳಲ್ಲಿ ಬೆನ್ನುರೆಕ್ಕೆಯ ಮೊದಲನೆಯ ಮುಳ್ಳು ಸೆಟೆದು ನಿಲ್ಲಲು ಹಿಂದಿರುವ ಸಣ್ಣ ಮುಳ್ಳು ನೆರವಾಗುತ್ತದೆ (ಬಂದೂಕಿನ ಒತ್ತು ಗುಂಡಿಯಂತೆ). ಅದಕ್ಕಾಗಿಯೇ ಈ ಮೀನುಗಳಿಗೆ ಟ್ರಿಗರ್ ಮೀನುಗಳು ಎಂದು ಹೆಸರು. ಅರಮೀನುಗಳಲ್ಲಿ ಎರಡನೆಯ ಸಣ್ಣ ಮುಳ್ಳು ದೇಹದಲ್ಲಿ ಹುದುಗಿಹೋಗಿರಬಹುದು. ಇವು ಸಾಮಾನ್ಯವಾಗಿ ತೀರಕ್ಕೆ ಸಮೀಪದಲ್ಲಿ ಮಣ್ಣು ಅಥವಾ ಮರಳಿನಿಂದ ಕೂಡಿದ ತಳಗಳಲ್ಲಿ ಹವಳ, ಸ್ಪಾಂಜ್ ಮತು ಪಾಚಿಗಳ ಸಮೀಪದಲ್ಲಿ ವಾಸಿಸುತ್ತದೆ. ಇವೆರಡಕ್ಕೂ ಚೂಪಾದ, ಬಲವಾದ ಬಾಚಿಹಲ್ಲುಗಳಿವೆ. ಇವುಗಳಿಂದ ಹವಳದ ಚೂರುಗಳನ್ನು ಕಡಿದು ತಿನ್ನಲು, ಮೃದಂಗಿಗಳ ಚಿಪ್ಪನ್ನು ಒಡೆದು ಒಳಗಿನ ಮಾಂಸವನ್ನು ತಿನ್ನಲು ಸಾಧ್ಯವಾಗಿದೆ. ಈ ಕಾರಣದಿಂದ ಮುತ್ತಿನ ಮತ್ತು ಮುತ್ತಿನ ಚಿಪುಗಳ ವ್ಯವಸಾಯಕ್ಕೆ ಈ ಮೀನುಗಳಿಂದ ಹೆಚ್ಚು ನಷ್ಟ. ಈ ಗುಂಪಿನ ಕೆಲವು ಮೀನುಗಳ ಮಾಂಸ ವಿಷಪೂರಿತವಾದದ್ದು.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು