dcsimg
Image of Kodo Millet
Creatures » » Plants » » Dicotyledons » » True Grasses »

Kodo Millet

Paspalum scrobiculatum L.

ಹಾರಕ ( Kannada )

provided by wikipedia emerging languages
Kodo Millet in Chhattisgarh.jpg

ಹಾರಕವು[೧] ಮುಖ್ಯವಾಗಿ ಭಾರತದಲ್ಲಿ ಬೆಳೆಯಲಾದ ಒಂದು ವಾರ್ಷಿಕ ಧಾನ್ಯ, ಜೊತೆಗೆ, ಫ಼ಿಲಿಪೀನ್ಸ್, ಇಂಡೊನೇಷ್ಯಾ, ವಿಯೆಟ್ನಾಮ್, ಥಾಯ್ಲಂಡ್, ಮತ್ತು ಪಶ್ಚಿಮ ಆಫ಼್ರಿಕಾದಲ್ಲೂ (ಇದು ಇಲ್ಲಿ ಹುಟ್ಟಿಕೊಂಡಿತು) ಬೆಳೆಯಲಾಗುತ್ತದೆ. ಈ ಬಹುತೇಕ ಪ್ರದೇಶಗಳಲ್ಲಿ ಇದನ್ನು ಸಣ್ಣ ಬೆಳೆಯಾಗಿ ಬೆಳೆಯಲಾಗುತ್ತದೆ, ದಖ್ಖನ ಪ್ರಸ್ಥಭೂಮಿಯನ್ನು ಹೊರತುಪಡಿಸಿ (ಇಲ್ಲಿ ಇದನ್ನು ಮುಖ್ಯ ಆಹಾರ ಮೂಲವಾಗಿ ಬೆಳೆಯಲಾಗುತ್ತದೆ). ಇದು ಬರವನ್ನು ಸಹಿಸಿಕೊಳ್ಳಬಲ್ಲ, ವಿಪರೀತ ಹವಾಮಾನದಲ್ಲಿ ಬೆಳೆಯಬಲ್ಲ ಬೆಳೆಯಾಗಿದೆ ಮತ್ತು ಇತರ ಬೆಳೆಗಳು ಬದುಕುಳಿಯಲಾಗದಿರುವ ಕೃಷಿ ಮಾಡಲು ಕಷ್ಟವಾದ ಮಣ್ಣುಗಳಲ್ಲಿ ಬದುಕುಳಿಯಬಲ್ಲದು, ಮತ್ತು ಪ್ರತಿ ಹೆಕ್ಟೇರಿಗೆ ೪೫೦-೯೦೦ ಕೆ.ಜಿ. ಧಾನ್ಯವನ್ನು ಪೂರೈಕೆ ಮಾಡಬಲ್ಲದು. ಹಾರಕವು ಆಫ಼್ರಿಕಾ ಮತ್ತು ಇತರೆಡೆಯ ಜೀವನಾಧಾರ ರೈತರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ.

ಸೇವನೆ ಮತ್ತು ಉಪಯೋಗಗಳು

ಭಾರತದಲ್ಲಿ, ಹಾರಕವನ್ನು ಹಿಟ್ಟಾಗಿ ಬೀಸಿ ಕಡುಬಿನಂಥ ಭಕ್ಷ್ಯವನ್ನು ತಯಾರಿಸಲು ಬಳಸಲಾಗುತ್ತದೆ. ಆಫ಼್ರಿಕಾದಲ್ಲಿ ಇದನ್ನು ಅಕ್ಕಿಯಂತೆ ಬೇಯಿಸಲಾಗುತ್ತದೆ. ಇದು ದನಗಳು, ಆಡುಗಳು, ಹಂದಿಗಳು, ಕುರಿಗಳು, ಮತ್ತು ಸಾಕುಕೋಳಿ ಜಾತಿಗಳಿಗೆ ಪ್ರಾಣಿ ಮೇವಾಗಿಯೂ ಒಳ್ಳೆ ಆಯ್ಕೆಯಾಗಿದೆ.

ಉಲ್ಲೇಖಗಳು

  1. A. E. Grant (1898), "Poisonous Koda millet". Letter to Nature, volume 57, page 271.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಹಾರಕ: Brief Summary ( Kannada )

provided by wikipedia emerging languages
Kodo Millet in Chhattisgarh.jpg

ಹಾರಕವು ಮುಖ್ಯವಾಗಿ ಭಾರತದಲ್ಲಿ ಬೆಳೆಯಲಾದ ಒಂದು ವಾರ್ಷಿಕ ಧಾನ್ಯ, ಜೊತೆಗೆ, ಫ಼ಿಲಿಪೀನ್ಸ್, ಇಂಡೊನೇಷ್ಯಾ, ವಿಯೆಟ್ನಾಮ್, ಥಾಯ್ಲಂಡ್, ಮತ್ತು ಪಶ್ಚಿಮ ಆಫ಼್ರಿಕಾದಲ್ಲೂ (ಇದು ಇಲ್ಲಿ ಹುಟ್ಟಿಕೊಂಡಿತು) ಬೆಳೆಯಲಾಗುತ್ತದೆ. ಈ ಬಹುತೇಕ ಪ್ರದೇಶಗಳಲ್ಲಿ ಇದನ್ನು ಸಣ್ಣ ಬೆಳೆಯಾಗಿ ಬೆಳೆಯಲಾಗುತ್ತದೆ, ದಖ್ಖನ ಪ್ರಸ್ಥಭೂಮಿಯನ್ನು ಹೊರತುಪಡಿಸಿ (ಇಲ್ಲಿ ಇದನ್ನು ಮುಖ್ಯ ಆಹಾರ ಮೂಲವಾಗಿ ಬೆಳೆಯಲಾಗುತ್ತದೆ). ಇದು ಬರವನ್ನು ಸಹಿಸಿಕೊಳ್ಳಬಲ್ಲ, ವಿಪರೀತ ಹವಾಮಾನದಲ್ಲಿ ಬೆಳೆಯಬಲ್ಲ ಬೆಳೆಯಾಗಿದೆ ಮತ್ತು ಇತರ ಬೆಳೆಗಳು ಬದುಕುಳಿಯಲಾಗದಿರುವ ಕೃಷಿ ಮಾಡಲು ಕಷ್ಟವಾದ ಮಣ್ಣುಗಳಲ್ಲಿ ಬದುಕುಳಿಯಬಲ್ಲದು, ಮತ್ತು ಪ್ರತಿ ಹೆಕ್ಟೇರಿಗೆ ೪೫೦-೯೦೦ ಕೆ.ಜಿ. ಧಾನ್ಯವನ್ನು ಪೂರೈಕೆ ಮಾಡಬಲ್ಲದು. ಹಾರಕವು ಆಫ಼್ರಿಕಾ ಮತ್ತು ಇತರೆಡೆಯ ಜೀವನಾಧಾರ ರೈತರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು