ಜಾಜಿ (ಜ್ಯಾಸ್ಮಿನಮ್ ಗ್ರ್ಯಾಂಡಿಫ಼್ಲೋರಮ್) ದಕ್ಷಿಣ ಏಷ್ಯಾ ಇತ್ಯಾದಿಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಜಾತಿ. ಈ ಪ್ರಜಾತಿಯನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ ಹಾಗೂ ಮಾರೀಷಸ್, ಜಾವಾ, ಮಧ್ಯ ಅಮೇರಿಕಾ ಇತ್ಯಾದಿಗಳಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ. ಅದು ೨-೪ ಮಿ. ಎತ್ತರ ಬೆಳೆಯುವ ಒಂದು ತೆವಳುವ ಪರ್ಣಪಾತಿ ಪೊದೆಸಸ್ಯ. ಈ ಹೂವು ಬಿಳಿಯಾಗಿದ್ದು ತುಸು ನಸುಗೆಂಪಿನಿಂದ ಕೂಡಿದೆ. ಇದರ ತವರೂರು ಭಾರತ. ಜಾಜಿ ಹೂವು, ಎಲೆ ಹಾಗೂ ಬೇರು ಔಷಧೀಯ ಗುಣವನ್ನು ಹೊಂದಿದೆ. ಇದು ಉತ್ತರ ಹಿಮಾಲಯ, ಪಶ್ಚಿಮ ಬಂಗಾಳ, ಆಂಧ್ರದ ವಿಶಾಖಪಟ್ಟಣ, ತಮಿಳುನಾಡಿನ ತಿರುನಲ್ಲೇರಿ ಗುಡ್ಡ ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುತ್ತದೆ. ಇದು ಕಡುಹಸಿರು ಬಣ್ಣದ ಚಿಕ್ಕ ಎಲೆಗಳನ್ನು ಹೊಂದಿದ್ದು, ಪೊದೆಯಾಗಿ ಅಥವಾ ಚಪ್ಪರಗಳಲ್ಲಿ ಬೆಳೆಯಬಲ್ಲ ಬಳ್ಳಿಯಾಗಿದೆ. ಇದನ್ನು ಸುಗಂಧ ದ್ರವ್ಯ ತಯಾರಿಸಲು ಬಳಸುತ್ತಾರೆ. ಈ ಹೂವುಗಳಲ್ಲಿ ಸುಗಂಧ ನೀಡುವ `ಇಂಡೋಲ್' ಎಂಬ ರಾಸಾಯನಿಕ ಪದಾರ್ಥ ಇದೆ.
ಕನ್ನಡ: ಜಾಜಿ ಮಲ್ಲೆ, ಜಾಜಿ ಮಲ್ಲಿಗೆ, ಜಾಜಿ ಹೂವು
ಸಂಸ್ಕೃತ: ಚೇಟಕಿ, ಹಸಂತಿ, ಜನೇಷ್ಠ, ಮಾಲಿನಿ, ಮನೋಹರ, ರಾಜಪುತ್ರಿ, ಸಂಧ್ಯಾಪುಷ್ಠಿ, ಸುಮನ
ಹಿಂದಿ: ಚಮೇಲಿ, ಚಂಬೇಲಿ, ಜಾಟಿ
ಇಂಗ್ಲೀಷ್: ಸ್ಪಾನಿಶ್ ಜಾಸ್ಮಿನ್