ಇದು ಟಾಕ್ಷಿಕೊಡೆಂಡ್ರಾನ್ ಅಂದರೆ ಸಸ್ಯಶಾಸ್ತ್ರದಲ್ಲಿ ಇದನ್ನು ವಿಷಕಾರಿ ಹರಿದ್ವರ್ಣ ಸಸ್ಯ ಜಾತಿಗೆ ಸೇರಿದ ಪೊದೆಯುಳ್ಳ ಕಂಟಿ ಎನ್ನಲಾಗುತ್ತದೆ.ರುಸ್ ಟಾಕ್ಷಿಕೊಡೆಂಡ್ರಾನ್ ,[೧]ರುಸ್ ರಾಡಿಕನ್ಸ್ ಇದು ಅತ್ಯಂತ ವಿಷಯುಕ್ತ ಬಳ್ಳಿಯ ಜಾತಿಯಾಗಿದೆ.ಅನಾಕರ್ಡಿ ಅಕೇಶಿಯಾ ಎಂಬ ಸಸ್ಯ ವರ್ಗಕ್ಕೆ ಇದು ಸೇರಿದ್ದು ಎಂದೂ ಹೇಳಲಾಗುತ್ತದೆ. ಇದು ಪೊದೆಯುಳ್ಳ ಬಳ್ಳಿ ಒಂದು ವಿಚಿತ್ರ ಮತ್ತು ಹಾನಿಕಾರಕ ರಸ ಸೃವಿಸುವ ಸಾಮರ್ಥ್ಯ ಹೊಂದಿದೆ.ಇದರ ತಗಲುವಿಕೆಯು ಮನುಷ್ಯರ ಚರ್ಮದ ಮೇಲೆ ತುರಿಕೆ ಅಥವಾ ನವೆಯುಂಟಾಗಿ ಅಲ್ಲಿಚರ್ಮಕ್ಕೆ ಬಿರುಕು ಉಂಟಾಗುವ ಸಾಧ್ಯತೆ ಇದೆ.ತಂತ್ರಜ್ಞಾನದ ಪ್ರಕಾರ ಇದು ಯುರಿಶಿಯಲ್ ಸಂಪರ್ಕದಿಂದಾಗಿ ಮನುಷ್ಯನ ಚರ್ಮದ ಮೇಲ್ಪದರದ ಮೇಲೆ ಪರಿಣಾಮ ಬೀರುತ್ತದೆ.ಆದರೆ ಇದು ನಿಜವಾದ ಹಸಿರುಜಾತಿ ಹೆಡೆರಾ ಸಸ್ಯವಲ್ಲ.
ವಿಷಯುಕ್ತ ಹಸಿರು ಸಸ್ಯವು ಉತ್ತರ ಅಮೆರಿಕದಾದ್ಯಂತ,ಕೆನೆಡಿಯನ್ ಮೇರಿಟೈಮ್ ಪ್ರಾಂತ್ಯಗಳಾದ ಕ್ವುಬೆಕ್ ಮತ್ತು ಒಂಟಾರಿಯೊ,ಅಲ್ಲದೇ U.S.ನ ಎಲ್ಲಾ ರಾಜ್ಯಗಳು ಪೂರ್ವದ ಬಂಡೆಗಳು ಅಂದರೆ ಉತ್ತರ ಡಕೊಟಾ ಬಿಟ್ಟರೆ ಮತ್ತೆ ಮೆಕ್ಷಿಕೊ ಸುತ್ತಮುತ್ತ(1,500 m (4,900 ft)ಕ್ಯಾಕ್ವಿಸ್ಟಲೆ ಅಥವಾ ಕ್ಯಾಕ್ಷಿಸ್ಟಲ್ ನಹಾಯುತ್ ಪದ ನೋಡಿ),ಇದು ಸಾಮಾನ್ಯವಾಗಿ ಅರಣ್ಯ ಪ್ರದೇಶದ ಅಂಚಿನ ಭಾಗದಲ್ಲಿ ಬೆಳೆಯುತ್ತದೆ. ಇದು ಬಯಲು ತೆರೆದ ಬಂಡೆ ಪ್ರದೇಶಗಳು ಮತ್ತು ಬಯಲು ವಿಶಾಲ ಜಾಗೆ ಮತ್ತು ಫಲವತ್ತಾಗಿರದ ಜಮೀನಿನಲ್ಲಿ ಕಾಣಬರುತ್ತದೆ. ಇದನ್ನು ಅರಣ್ಯದ ಸಸ್ಯವೆಂದೂ ಬೆಳೆಸಲಾಗುತ್ತದೆ.ಮರಗಳ ನೆರಳಲ್ಲೂ ಇದು ಬೆಳೆಯುವ ಸಾಮರ್ಥ್ಯ [೧]ಪಡೆದಿದೆ. ಹೊಸ ಇಂಗ್ಲೆಂಡಿನ ಉಪಪ್ರಾಂತ್ಯ ಮತ್ತು ಸಾಮಾನ್ಯ ಭೂ ಪ್ರದೇಶ ಮಧ್ಯ ಅಟ್ಲಾಂಟಿಕ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ವಾಯುವ್ಯ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದೇ ತೆರನಾದ ಸಸ್ಯಜಾತಿಗಳು ವಿಷಯುಕ್ತ-ಯೋಕ್ ಮತ್ತು ಟಾಕ್ಷಿಕೊಡೆಂಡ್ರಾನ್ ರಿಡ್ ಬೆರ್ಗಿಲ್ ಸಸ್ಯ ಜಾತಿಯ ಬಳ್ಳಿಗಳು ಉತ್ತರ ಅಮೆರಿಕಾದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತವೆ. ವಿಷಯುಕ್ತ ಹಸಿರು ಸಸ್ಯವು ಅಕ್ಷಾಂಶಗಳ 1,500 m (4,900 ft)ಮೇಲ್ಭಾಗದಲ್ಲಿ ಬೆಳೆಯುತ್ತದೆ,ಅಕ್ಷಾಂಶ ಮತ್ತು ರೇಖಾಂಶಗಳ ಎತ್ತರ ಪ್ರಮಾಣವು ಆಯಾ ಸ್ಥಳೀಯತೆಯನ್ನು ಆಧರಿಸಿ ವ್ಯತ್ಯಾಸ [೧]ಹೊಂದುತ್ತಿರುತ್ತದೆ. ಈ ಸಸ್ಯವು ಒಂದು ಪೊದೆ ಅಥವಾ ಕಂಟಿ ಬೇಲಿಯಷ್ಟು 1.2 metres (3.9 feet)ಎತ್ತರಕ್ಕೆ ಬೆಳೆದು ಹಬ್ಬಬಲ್ಲದು,ಇದರ ಬೆಳವಣಿಗೆಯಿಂದ ಕೆಳಭಾಗದ ಪ್ರದೇಶ ಕೂಡಾ ಕಾಣದಷ್ಟು ಇದು 10–25 cm (3.9–9.8 in)ಅಕ್ಕ ಪಕ್ಕದ ಆಸರೆಯೊಂದಿಗೆ ಪಸರಿಸುತ್ತದೆ. ಇದರ ಹಳೆಯ ಬಳ್ಳಿಯ ಕವಲುಗಳು ಹೇಗೆ ಹರಡಿಕೊಂಡಿರುತ್ತವೆ ಎಂದರೆ ಇದು ಸುತ್ತಿಕೊಂಡ ಮರವೇ ಇದಾಗಿದೆ ಎಂದು ಭಾಸವಾಗುತ್ತದೆ.
ಇದು ಮಣ್ಣಿನ ಆರ್ದ್ರತೆಗೆ ಅಷ್ಟಾಗಿ ಪ್ರತಿಕ್ರಿಯಿಸುದಿಲ್ಲವಾದರೂ ಇದು ಮರಭೂಮಿ ಅಥವಾ ಒಣ ಭೂಪ್ರದೇಶದಲ್ಲಿ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆಯಲಾರದು. ಇದು ವಿಶಾಲ ಮತ್ತು ವಿಭಿನ್ನ ಜಾತಿಯಮಣ್ಣಿನ ಪ್ರದೇಶದಲ್ಲಿ ಬೆಳೆಯುತ್ತದೆ.ಮಣ್ಣುpH 6.0ಯಿಂದ (ಆಮ್ಲಿಕ) 7.9(ಸಾಮಾನ್ಯ ಅಲ್ಕಲೈನ್ ) ಆಗಾಗ ಪ್ರವಾಹಕ್ಕೀಡಾಗುವ ಪ್ರದೇಶ ಮತ್ತುಹಿನ್ನೀರಿನ ಜವಳು ಪ್ರದೇಶದಲ್ಲಿಯೂ ಇದು [೧]ಬೆಳೆಯುತ್ತದೆ.
.ಯುರೊಪಿಯನ್ ರು ಉತ್ತರ ಅಮೆರಿಕಾದಲ್ಲಿ ಮೊದಲು ಪ್ರವೇಶ ಮಾಡಿದಾಗಿನ ಅವಧಿಗಿಂತ ಇದು ಈಗ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಯೋಜನಾ ಪ್ರದೇಶಕ್ಕೆ ಹೊಂದಿಕೊಂಡ ಜಾಗ,ಅಲ್ಲದೇ ಅಭಿವೃದ್ಧಿ ಕಾಣದ ಪ್ರದೇಶಗಳು ಇದರ ಬೆಳೆಯಿಂದ "ಅಪಾಯದ ಪರಿಣಾಮಗಳ ಅಂಚಿಗೆ" ಹೋಗಬಹುದು. ಯಾಕೆಂದರೆ ಈ ವಿಷಯುಕ್ತ ಹಸಿರು ಸಸ್ಯ ವಿಶಾಲವಾಗಿ ಬೆಳೆದು ಹಸಿರು ಪೊದೆಯನ್ನೇ ನಿರ್ಮಿಸುತ್ತವೆ. ಇದು U.Sನ ಮಿನ್ನೊಸ್ಟಾ ಮತ್ತು ಮಿಚಿಗೆನ್ ಮತ್ತು ಒಂಟಾರಿಯೊದ ಕೆನಡಿಯನ್ ಪ್ರದೇಶಗಳಲ್ಲಿ ಇದನ್ನು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಅಪಾಯಕಾರಿ ಕಸದ ಹುಲ್ಲು ಎನ್ನಲಾಗುತ್ತದೆ.
ವಿಷಯುಕ್ತ ಹಸಿರು ಸಸ್ಯ ಮತ್ತು ಅದಕ್ಕೆ ಸಮಾನ ಸಸ್ಯಗಳು ಯುರೋಪಿನಲ್ಲಿ ಅಪರಿಚಿತವಾಗಿಯೇ ಉಳಿದುಕೊಂಡಿವೆ. U.S ಮತ್ತು ಕೆನಡಾದಲ್ಲಿರುವ ಹಲವಾರು ಯುರೋಪಿಯನ್ ರು ಇಂತಹ ಆರೋಗ್ಯಕ್ಕೆ ಹಾನಿಕಾರಕ ಸಸ್ಯವೊಂದು ನಮ್ಮ ಭೂಖಂಡದಲ್ಲಿ ಇಷ್ಟೊಂದು ಸಾಮಾನ್ಯವಾಗಿ ಬೆಳೆಯುತ್ತದಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಇದರ ಉದುರುವ ಎಲೆಗಳು ವಿಷಯುಕ್ತ ಹಸಿರು ಬಾದಾಮಿ ಆಕಾರದಮೂರು ಎಲೆಗಳನ್ನು ಪಡೆದಿದ್ದು ಇದು ಮೂರು ಅಂಚುಗಳಲ್ಲಿ ಬೆಳೆದು ತನ್ನ ಎಲೆ ಭಾಗಗಳನ್ನು [೧]ಚಾಚಿಕೊಂಡಿರುತ್ತದೆ. ಎಲೆಗಳ ಬಣ್ಣವು ಸಾಮಾನ್ಯವಾಗಿ ತಿಳಿ ಹಸಿರು(ಸಾಮಾನ್ಯವಾಗಿ ಎಳೆ ಎಲೆಗಳು) ವರ್ಣದಿಂದ ಕಪ್ಪು ಹಸಿರು(ಮಾಗಿದ ಎಲೆಗಳು),ಉದುರುವ ಹೊತ್ತಿಗೆ ಅವು ಕಡುಕಪ್ಪು ಬಣ್ಣದ್ದಾಗಿರುತ್ತವೆ;ಇನ್ನು ಕೆಲವು ಮೂಲಗಳ ಪ್ರಕಾರ ಎಲೆಗಳು ದೊಡ್ದದಾಗುವಾಗ ಕೆಂಪು,ಮಾಗುವ ಅವಧಿಯಲ್ಲಿ ಹಸಿರು ಮತ್ತೆ ಮರಳಿ ಕೆಂಪು ಮತ್ತು ಕಿತ್ತಳೆ ಅಥವಾ ಹಳದಿಯಾಗಿ ಬಿದ್ದು ಹೋಗುತ್ತವೆ. ಮಾಗಿದ ಎಲೆಗಳು ಕೊಂಚ ಮಿಂಚಿನ ಹೊಳಪನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಎಲೆಗಳು 3 ರಿಂದ 12 ಸೆಂಟಿ ಮೀಟರ್ ಉದ್ದ,ಅಪರೂಪವೆನ್ನುವಂತೆ 30 ಸೆಂಟಿಮೀಟರ್ ವರೆಗೂ ಉದ್ದವಾಗಿರುತ್ತವೆ. ಪ್ರತಿಯೊಂದು ಬಿಡಿ ಎಲೆ ಅಥವಾ ಚಿಗುರೆಲೆ ತನ್ನ ಅಂಚಿನಲ್ಲಿ ಒಂದೆರೆಡು ಹಲ್ಲಿನಂತಹ ಎಳೆ ಹೊಂದಿರುತ್ತದೆ,ಆದರೆ ಅದರ ಮೇಲ್ಭಾಗ ಮೆದುವಾಗಿರುತ್ತದೆ. ಬಿಡಿ ಎಲೆಗಳ ಸೂಡು ಅಥವಾ ಗುಂಪು ಪೊದೆ ಮೇಲೆ ಪರ್ಯಾಯವಾಗಿ ಪಸರಿಸಿರುತ್ತದೆ,ಆದರೆ ಇಲ್ಲಿ ಮುಳ್ಳು ಇರುವುದಿಲ್ಲ. ಮರದ ಕೊಂಬೆ ಮೇಲೆ ಬೆಳೆಯುವ ಬಳ್ಳಿಯು ತನ್ನ ಬೇರುಗಳನ್ನು ಬಿಗಿಯಾಗಿ ಚಾಚುವ ಮೂಲಕ ಸುತ್ತಮುತ್ತಲೂ [೨]ಹಬ್ಬಿರುತ್ತದೆ. ಈ ಬಳ್ಳಿಯು ಬೆಳವಣಿಗೆಗೆ ಅನುಕೂಲಕರವಾಗಿ ಬೇರುಗಳನ್ನು ಬಿಡುತ್ತದೆ,ಅಥವಾ ಈ ಸಸ್ಯವುಕಾಂಡದ ಬೇರುಗಳ ಮೂಲಕ ಕೆಳಗಿನಿಂದ ಬೇರುಗಳ ಕವಚವನ್ನು ಬೆಳೆಸುತ್ತದೆ. ಈ ಹಸಿರು ಸಸ್ಯದ ಹಾಲಿನಂತಹ ಗಟ್ಟಿ ವಿಷವು ಗಾಳಿಗೆ ತೆರೆದುಕೊಂಡ ನಂತರ ಕಪ್ಪು ಬಣ್ಣಕ್ಕೆ ತಿರುಗಿಕೊಳ್ಳುತ್ತದೆ.
ವಿಷಯುಕ್ತ ಹಸಿರು ಸಸ್ಯವು ಸಸ್ಯಜಾತಿಯಾಗಿ ಮತ್ತು ತನ್ನ ಸಂತತಿ ವೃದ್ಧಿಸಲು ನಿರಂತರವಾಗಿ ಹಬ್ಬುತ್ತಿರುತ್ತದೆ. ವಿಷಯುಕ್ತ ಹಸಿರು ಸಸ್ಯವು ವಿಭಿನ್ನ ಲಿಂಗಿಯಾಗಿದ್ದು,ಮೇ ತಿಂಗಳಿಂದ ಜುಲೈ ವರೆಗೆ ಹೂ ಬಿಡುವುದು ಮತ್ತು ಪರಾಗಸ್ಪರ್ಶಕ್ಕೆ ಅಣಿಯಾಗುತ್ತದೆ. ಹಳದಿ-ಅಥವಾ ಹಸಿರು ಮಿಶ್ರಿತ ಬಿಳಿ ಬಣ್ಣದಹೂವುಗಳು ಕಾಂತಿಹೀನವಾಗಿರುತ್ತವೆ.ಎಲೆಗಳ ಸೂಡಿನ ಮೇಲ್ಭಾಗದಲ್ಲಿ ಸುಮಾರು ಎಂಟು ಸೆಂಟಿಮೀಟರ್ ನಷ್ಟು ಮೇಲೆ ಚಾಚಿರುತ್ತವೆ. ಬೆರ್ರಿ ಹಣ್ಣಿನಂತಹ ಒಂದು ಗೊರಟೆ ಕಾಯಿ ಅಥವಾ ಓಟೆಯು ಆಗಷ್ಟ್ ನಿಂದ ನವೆಂಬರ್ ಹೊತ್ತಿಗೆ ನೇರಳೆ-ತಿಳಿ ಬಿಳುಪಿನ [೧]ಹಣ್ಣಾಗುತ್ತದೆ. ಇದರ ಹಣ್ಣುಗಳು ಚಳಿಗಾಲದಲ್ಲಿ ಹಲ್ವು ಪಕ್ಷಿ ಪ್ರಾಣಿಗಳ ನೆಚ್ಚಿನ ಆಹಾರವೆನಿಸಿವೆ. ಇದರ ಬೀಜಗಳು ಬಹುತೇಕವಾಗಿ ಪ್ರಾಣಿಗಳಿಂದ ಪಸರಿಸುತ್ತವೆ.ಪ್ರಾಣಿಗಳ ಜೀರ್ಣಕ್ರಿಯೆಯ ನಂತರ ಇವು ವಿವಿಧ ಜಾಗೆಗಳಲ್ಲಿ ಬೆಳೆಯಲು ಅನುಕೂಲವಾಗುತ್ತವೆ.
ಈ ಕೆಳಗಿನ ಮೂರು ಗುಣಲಕ್ಷಣಗಳ ಮೂಲಕ ಈ ವಿಷಯುಕ್ತ ಹಸಿರು ಸಸ್ಯವನ್ನು ಗುರ್ತಿಸಬಹುದಾಗಿದೆ: ಮೂರು ಎಲೆಗಳ ಸೂಡು,ಪರ್ಯಾಯ ಎಲೆಗಳ ವ್ಯವಸ್ಠೆ ಮತ್ತು ಮುಳ್ಳುಗಳಿಲ್ಲದಿರುವುದು. ಆದಾಗ್ಯೂ ಅಸಂಖ್ಯಾತ ಇತರ ಸಸ್ಯಗಳು ಇದೇ ತೆರನಾಗಿದ್ದುದು ಕಂಡು ಬರುತ್ತವೆ,ಇಂತಹದೇ ಗುಣಗಳಿರುವ ಸಸ್ಯ ಸಂಕುಲಗಳಿಗೆ ಹೆದರಿಕೊಳ್ಳಬೇಕಾಗುತ್ತದೆ.ಇದಕ್ಕಾಗಿ ಅಪರಿಚಿತ ಸಸ್ಯಗಳನ್ನು ಗುರ್ತಿಸಿ ವಿಷಯುಕ್ತ ಹಸಿರು ಸಸ್ಯಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಅನುಭವಸ್ಥ ಜನರು ಈ ಎಲೆಗಳಿಂದ ಹಾನಿಯಾಗುವುದನ್ನು ಹೇಳುತ್ತಾರೆ,ಚಳಿಗಾಲದಲ್ಲಿ ಎಲೆಗಳಿಲ್ಲದ ಈ ಸಸ್ಯವು ಬೋಳು ಬೋಳಾಗಿದ್ದರೂ ಮತ್ತೆ ಚಿಗುರಿಕೊಳ್ಳುತ್ತದೆ,ಪರಿಸರ ಮತ್ತು ಸಂತತಿ ವೃದ್ಧಿಗೆ ನೆರವಾಗುತ್ತದೆ.
ಹಲವಾರು ರಾಸಾಯನಿಕ ನಿಯಮಗಳು ವಿಶಯುಕ್ತ ಹಸಿರು ಸಸ್ಯದ ಗುಣಲಕ್ಷಣಗಳನ್ನು ಗೋಚರಿಸುವಿಕೆಯಿಂದಲೇ ಕಂಡು ಹಿಡಿದು [೩]ಬಿಡುತ್ತಾರೆ.
!" appearance.ವಿಷಯುಕ್ತ ಹಸಿರು ಸಸ್ಯದ ಬಳ್ಳಿಗಳು ಮರದ ಮೇಲೆ ಒಂದು ತೆರನಾದ "ಮಿಂಚನ್ನು" ಹೊಂದಿರುತ್ತವೆ. ಈ ಬಳ್ಳಿಯ ಸುತ್ತುವರಿಕೆಯು ಮರ ಹತ್ತುವವರಿಗೆ ಒಂದು ಎಚ್ಕರಿಕೆಯಾಗಿರುತ್ತದೆ.
ಈ ವಿಷಯುಕ್ತ ಹಸಿರು ಸಸ್ಯವು ಉರುಶಿಯೊಲ್ -ಸಂಪರ್ಕವು ಚರ್ಮದ ಒಳಭಾಗಕ್ಕೆ ಪ್ರವೇಶಿಸಿ ಅಲರ್ಜಿ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದು. ಸುಮಾರು 15%[೮] ರಿಂದ 30%[೯]ರಷ್ಟು ಜನರು ಯಾವುದೇ ಅಲರ್ಜಿಗೆ ಒಳಗಾಗುವದಿಲ್ಲ, ಆದರೆ ಪದೇ ಪದೇ ಈ ಸಸ್ಯದ ಎಲೆಗಳೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಅಥವಾ ಉರುಶಿಯೊಲ್ ನೊಂದಿಗೆ ಒಡ್ದಿಕೊಂಡರೆ ಇದು ಸಂವೇದನಾ ಶೀಲತೆಗೆ ಧಕ್ಕೆ ಯನ್ನುಂಟು ಮಾದಬಹುದು. Reactions can progress to ಇದರ ಪ್ರತಿಕ್ರಿಯೆಗಳು ಅಥವಾ ಅತಿ ಸಂವೇದನೆ ಶೀಲತೆಯಿಂದ ಊತಕ್ಕೆ ಕಾರಣವಾಗಬಹುದು.
ಇದರೊಳಗಿನ ಉರುಶಿಯೊಲ್ ಚರ್ಮದ ಸ6ಪರ್ಕಕ್ಕೆ ಬಂದ ನಂತರ ಅಲ್ಲಿ ತನ್ನ ಬಿಗಿಯನ್ನು ಸಾಧಿಸುತ್ತದೆ,ಇದರಿಂದಾಗಿ ನವೆಯ ವಿಪರೀತಗಳಿಂದಾಗಿ ಆ ಜಾಗೆಯಲ್ಲಿ ಕೆಂಪು ಬಣ್ಣದ ಚರ್ಮ ಉಂಟಾಗಿ ಉರಿತ ಅಥವಾ ಯಾವುದೇ ಬಣ್ಣ ಬರದಿದ್ದರೂ ಗುಳ್ಳೆ ಆಕಾರ ಪಡೆಯಬಹುದಾಗಿದೆ.ಇದು ಉಜ್ಜುವುದರಿಂದಾಗಿ ಒಂದು ಬೊಕ್ಕೆಗೆ ದಾರಿ ಮಾಡಿಕೊಡುತ್ತದೆ. ಇದನ್ನು ಕ್ಯಾಲಾಮೈನ್ ಮುಲಾಮಿನಿಂದ ಇದನ್ನು ಚಿಕಿತ್ಸೆ [೧೦]ಮಾಡಬಹುದಾಗಿದೆ.ಬುರೊಸ್ ಪರಿಹಾರಗಳು ಅಥವಾ ಸ್ನಾನ ಮಾಡುವುದರಿಂದ ಇದನ್ನು ಹೋಗಲಾಡಿಸುವ ಸಾಧ್ಯತೆ ಇದೆ.ಆದರೆ ಕೆಲವು ಸಂಪ್ರದಾಯಿಕ ಔಷಧಿಗಳು ಅಷ್ಟಾಗಿ [೧೧][೧೨]ಪರಿಣಾಮಕಾರಿಯಲ್ಲ. ಈ ವಿಷಯುಕ್ತ ಹಸಿರು ಸಸ್ಯದ ನವೆ ಮತ್ತು ದುಷ್ಪರಿಣಾಮಗಳಿಗೆ ವೈದ್ಯರು ನವೆ ನಿವಾರಣೆಗೆ ಸರಳವಾಗಿ ಅಂದರೆ ಒಟಾಮೀಲ್ ಸ್ನಾನ ಮತ್ತು ಅಡಿಗೆ ಸೋಡಾವನ್ನು ಬಳಸುವಂತೆ ಸಲಹೆ ಶಿಫಾರಸು [೧೩]ಮಾಡುತ್ತಾರೆ. ಹಲವಾರು ಗಂಭೀರ ಪ್ರಕರಣಗಳಲ್ಲಿ ಈ ಬಳ್ಳಿಯಿಂದ ಹೊರ ಭಾಗದಲ್ಲಿ ಸುರಿಯುತ್ತಿರುತ್ತದೆ.ಈ ಸಂದರ್ಭದಲ್ಲಿಸ್ಟಿರೊಯಿಡ್ ಅಥವಾ ಹಾರ್ಮೋನ್ ಗಳನ್ನು ಇದರ ಗುಣಮುಖ ಮಾಡಲು ಬಳಸಲಾಗುತ್ತದೆ.
ಇದರಿಂದ ಉತ್ಪತ್ತಿಯಾದ ದೃವವು ಗುಳ್ಳೆಗಳಿಗೆ ಕಾರಣವಾದರೂ ಇದು ವಿಶವನ್ನು [೧೪][೧೫][೧೬]ಪಸರಿಸುವುದಿಲ್ಲ. ಚರ್ಮದ ಮೇಲಿನ ಕೆಲವು ಸೂಕ್ಷ್ಮ ಜಾಗಗಳಲ್ಲಿ ಈ ದೃವವು ಅಂಟಿಕೊಂಡರೆ ಇದರ ವಿಷದ ತೀವ್ರತೆಯು ಅಧಿಕವಾಗಿರುತ್ತದೆ.ಬೇರೆ ಬೇರೆ ಜಾಗಗಳಲ್ಲಿ ಇದು ಅಂಟಿಕೊಂಡಿದ್ದರೂ ಮೂಲ ವಿಷಪ್ರಮಾಣದಷ್ಟು ಅಪಾಯಕಾರಿ [೧೪]ಎನಿಸದು. ಚರ್ಮದ ಗುಳ್ಳೆಗಳು ಉರಿ ಹಾಗು ಕೆಂಪಾದ ಚರ್ಮದ ರಾಶ್ ಕಾರಣವಾಗುತ್ತವೆ,ಇವುಗಳ ಮಧ್ಯ ಉಂಟಾದ ಜಾಗದಲ್ಲಿ ಸಣ್ಣಗೆ ದೃವ ಸೃವಿಸುತ್ತದೆ,ಇದು ಚರ್ಮದ ಮೂಲಕ ಸಂಪರ್ಕಕ್ಕೆ ಬರುವಾಗ ಉರಿತ ಬರುತ್ತದೆ ಇದನ್ನು ತಕ್ಷಣದಲ್ಲಿ ತಂಪುಗೊಳಿಸಿದರೆ ಇದು ಶಮನವಾಗುವುದು. ಈ ವಿಷಯುಕ್ತ ಹಸಿರು ಸಸ್ಯವನ್ನು ಸುಟ್ಟರೆ ಇದರ ಹೊಗೆಯಿಂದ ಉಂಟಾಗುವ ಮಾಲಿನ್ಯವು ಗಂಟಲೊಳಗೆ ಪ್ರವೇಶಿಸಿ ಶ್ವಾಸನಾಳದ ಮೇಲೆ ಪರಿಣಾಮ ಬೀರಬಹುದಾಗಿದೆ.ಇದರಿಂದ ಅತೀವ ನೋವು ಮತ್ತು ಗಂಭೀರ ಉಸಿರಾಟದ ತೊಂದರೆ [೧೭]ಕಾಣಿಸಿಕೊಳ್ಳಬಹುದು. ವಿಷಯುಕ್ತ ಹಸಿರು ಸಸ್ಯವನ್ನು ತಿಂದರೆ ಜೀರ್ಣಾಂಗ,ಉಸಿರಾಟದ ಮಾರ್ಗ,ಮೂತ್ರಕೋಶಗಳು ಅಥವಾ ಇನ್ನಿತರ ಅವಯವಗಳು ತೀವ್ರ ಹಾನಿಗೀಡಾಗುತ್ತವೆ. ವಿಷಯುಕ್ತ ಹಸಿರು ಸಸ್ಯದ ಚರ್ಮದ ಮೇಲಿನ ಇದರ ಪರಿಣಾಮವು ಒಂದು ವಾರದಿಂದ ನಾಲ್ಕು ವಾರಗಳ ಅವಧಿಯಲ್ಲಿ ಕಾಣಿಸಬಹುದಾಗಿದೆ.ಇದರ ಗಂಭೀರತೆಯನ್ನು ಪರಿಗಣಿಸಿ ಔಷಧೋಪಚಾರ ಮಾಡಬಹುದಾಗಿದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ವಿಷಯುಕ್ತ ಹಸಿರು ಸಸ್ಯದ ಪ್ರತಿಕ್ರಿಯೆಗಳು ಆಸ್ಪತ್ರೆಗೆ ದಾಖಲಿಸುವ ಪ್ರಸಂಗವೂ [೧೪][೧೮]ಬರಬಹುದು.
ಉರುಶಿಯೊಲ್ ಎಣ್ಣೆಯು ಹಲವಾರು ವರ್ಷಗಳ ಕಾಲ ಕ್ರಿಯಾತ್ಮಕವಾಗಿರುತ್ತದೆ.ಕಳಚಿದ ಎಲೆಗಳ ಅಥವಾ ಬಳ್ಳಿಯನ್ನು ಮುಟ್ಟುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಅದೂ ಅಲ್ಲದೇ ಪ್ರಾಣಿಗಳ ಮೂಲಕ ಪಸರಿಸುವ ಈ ವಿಷಯುಕ್ತ ದೃವವು ಚರ್ಮದ ಮೇಲೆ ಗೆರೆಯಂತಹ ಗುರುತುಗಳನ್ನು [೧೯][೨೦]ಮೂಡಿಸುತ್ತದೆ. ಬಟ್ಟೆ,ಸಲಕರಣೆಗಳು ಮತ್ತು ಇನ್ನಿತರ ವಸ್ತುಗಳು ಎಣ್ಣೆ ತಗಲುವುದರಿಂದ ಅಥವಾ ಅದಕ್ಕೆ ಒಡ್ದುವುದರಿಂದ ಇದು ದುಷ್ಪರಿಣಾಮ ಉಂಟು ಮಾಡುತ್ತದೆ.ಇದರ ಅವಘಡ ತಪ್ಪಿಸಲು ಮೊದಲೇ ಸ್ವಚ್ಚಗೊಳಿಸಿದರೆ ಉತ್ತಮ. ಈ ವಿಷಯುಕ್ತ ಹಸಿರು ಸಸ್ಯದ ಸಂವೇದನಾಶೀಲವು ಮಾವಿನ ಹಣ್ಣಿನಿಂದ ಉಂಟು ಮಾಡುವ ಪರಿಣಾಮವೇ ಇದರಿಂದ ಉಂಟಾಗುತ್ತದೆ. ಮಾವಿನ ಕಾಯಿಗಳು ಕೂಡಾ ಅನಕಾರ್ಡಿಎಸಿಯಾ ಜಾತಿಗೆ ಸೇರಿದ ಸಸ್ಯ ವರ್ಗವಾಗಿದೆ.ಉರೊಶಿಯೊಲ್ ನಂತಹ ರಾಸಾಯನಿಕ ಪರಿಣಾಮವನ್ನುಂಟು [೨೧]ಮಾಡುತ್ತದೆ.
ಸುಮ್ಯಾಕ್ ಸಸ್ಯದ ಸುವಾಸನಾಯುಕ್ತರುಸ್ ಅರೊಮ್ಯಾಟಿಕ್ ಅಥವಾ ಜಪಾನಿನ ಲ್ಯಾಕರ್ ಗಿಡದ ವಿಷಯುಕ್ತ ಹಸಿರು ಸಸ್ಯದ ಗುಣವನ್ನೇ ಹೋಲುತ್ತದೆ.ಇವುಗಳ ಸಂಪರ್ಕದಿಂದಲೂ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
|title=
at position 27 (help) |accessdate=
(help) ಇದು ಟಾಕ್ಷಿಕೊಡೆಂಡ್ರಾನ್ ಅಂದರೆ ಸಸ್ಯಶಾಸ್ತ್ರದಲ್ಲಿ ಇದನ್ನು ವಿಷಕಾರಿ ಹರಿದ್ವರ್ಣ ಸಸ್ಯ ಜಾತಿಗೆ ಸೇರಿದ ಪೊದೆಯುಳ್ಳ ಕಂಟಿ ಎನ್ನಲಾಗುತ್ತದೆ.ರುಸ್ ಟಾಕ್ಷಿಕೊಡೆಂಡ್ರಾನ್ ,ರುಸ್ ರಾಡಿಕನ್ಸ್ ಇದು ಅತ್ಯಂತ ವಿಷಯುಕ್ತ ಬಳ್ಳಿಯ ಜಾತಿಯಾಗಿದೆ.ಅನಾಕರ್ಡಿ ಅಕೇಶಿಯಾ ಎಂಬ ಸಸ್ಯ ವರ್ಗಕ್ಕೆ ಇದು ಸೇರಿದ್ದು ಎಂದೂ ಹೇಳಲಾಗುತ್ತದೆ. ಇದು ಪೊದೆಯುಳ್ಳ ಬಳ್ಳಿ ಒಂದು ವಿಚಿತ್ರ ಮತ್ತು ಹಾನಿಕಾರಕ ರಸ ಸೃವಿಸುವ ಸಾಮರ್ಥ್ಯ ಹೊಂದಿದೆ.ಇದರ ತಗಲುವಿಕೆಯು ಮನುಷ್ಯರ ಚರ್ಮದ ಮೇಲೆ ತುರಿಕೆ ಅಥವಾ ನವೆಯುಂಟಾಗಿ ಅಲ್ಲಿಚರ್ಮಕ್ಕೆ ಬಿರುಕು ಉಂಟಾಗುವ ಸಾಧ್ಯತೆ ಇದೆ.ತಂತ್ರಜ್ಞಾನದ ಪ್ರಕಾರ ಇದು ಯುರಿಶಿಯಲ್ ಸಂಪರ್ಕದಿಂದಾಗಿ ಮನುಷ್ಯನ ಚರ್ಮದ ಮೇಲ್ಪದರದ ಮೇಲೆ ಪರಿಣಾಮ ಬೀರುತ್ತದೆ.ಆದರೆ ಇದು ನಿಜವಾದ ಹಸಿರುಜಾತಿ ಹೆಡೆರಾ ಸಸ್ಯವಲ್ಲ.