dcsimg

ಪೊಟೆಂಟಿಲ್ಲ ( Kannada )

provided by wikipedia emerging languages

ಪೊಟೆಂಟಿಲ್ಲ - ರೋಸೇಸೀ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಸಸ್ಯ ಜಾತಿ. ಇದರ ಪ್ರಭೇದಗಳು ಮೂಲಿಕೆಗಳಾಗಿಯೂ ಪೊದೆಗಳಾಗಿಯೂ ಬೆಳೆಯುವುವು. ಸಮಶೀತೋಷ್ಣ ವಲಯದ ಉತ್ತರ ಭಾಗದಲ್ಲಿ ಇವನ್ನು ಕಾಣಬಹುದು. ಸಾಮಾನ್ಯ ಭಾಷೆಯಲ್ಲಿ ಇವಕ್ಕೆ ಸಿಂಕ್‍ಫಾಯಿಲ್ಸ್ ಎಂದು ಹೆಸರು. ತೋಟಗಳಲ್ಲಿ ಅಂಚು ಗಿಡಗಳಾಗಿಯೂ ಬಂಡೆಗಳ ಮೇಲೆ ಬೆಳೆಸುವ ಗಿಡಗಳಾಗಿಯೂ ಅಲಂಕಾರಕ್ಕಾಗಿ ಇವನ್ನು ಬೆಳೆಸುವುದಿದೆ. ಹಿಮಾಲಯದಲ್ಲಿ ಹೇರಳವಾಗಿ ಬೆಳೆಯುತ್ತದೆ. ನೀಲಗಿರಿಯಲ್ಲೂ ಕೊಂಚ ಮಟ್ಟಿಗೆ ಬೆಳೆಸಿರುವುದುಂಟು.

ಬೆಳೆ

ಗಿಡಗಳನ್ನು ಬೀಜಗಳಿಂದ ಇಲ್ಲವೇ ಕಾಂಡ ಕಡ್ಡಿಗಳ ಅಥವಾ ಗೆಡ್ಡೆಗಳ ಮೂಲಕ ಬೆಳೆಸಬಹುದು.

ಪ್ರಭೇದಗಳು

 src=
European cinquefoil (P. reptans), the type species of Potentilla, was described by Linnaeus in 1753.

ಪೊಟೆಂಟಿಲ್ಲ ಅನ್ಸರೈನ, ಪೊ. ಪ್ರೂಟಿಕೋಸ, ಪೊ. ರೆಪ್ಟಾನ್ಸ್ ಎಂಬುವು ಮುಖ್ಯ ಪ್ರಭೇದಗಳು.

  • ಆನ್ಸರೈನ ಪ್ರಭೇದಕ್ಕೆ ಸಿಲ್ವರ್ ವೀಡ್ ಎಂಬ ಹೆಸರುಂಟು. ಇದು ಬಹುವಾರ್ಷಿಕ ಗಿಡ. ಚಿಕ್ಕದಾಗಿ ಸುಮಾರು 30 ಸೆಂ.ಮೀ. ಉದ್ದಕ್ಕೆ ಬೆಳೆಯುತ್ತದೆ. ಇದರ ಕಾಂಡ ಭೂಗತ ಬಗೆಯದು. ಎಲೆ ಸಂಯುಕ್ತ ಮಾದರಿಯದು. ಪ್ರತಿ ಎಲೆಯಲ್ಲಿ 12-24 ಕಿರು ಎಲೆಗಳುಂಟು. ಹೂಗಳು ದೊಡ್ಡವು. ಚಿನ್ನದ ಬಣ್ಣದವು. ಆಕರ್ಷಕವಾಗಿರುತ್ತವೆ. ಅನ್ಸರೈನ ಪ್ರಭೇದಕ್ಕೆ ಔಷಧೀಯ ಗುಣಗಳು ಉಂಟು. ಇದರ ಎಲೆಯನ್ನೂ ಚಹಾ ರೂಪದಲ್ಲಿ ಅಥವಾ ದ್ರಾಕ್ಷಾರಸದಲ್ಲಿ ಮಿಶ್ರ ಮಾಡಿ ಸೇವಿಸಿದರೆ ಅತಿಸಾರ, ಲ್ಯೂಕೋರಿಯ, ಮೂತ್ರಪಿಂಡ ಕಲ್ಲು, ಕೀಲುಊತ, ಸ್ನಾಯುಹಿಡಿತ ಮುಂತಾದ ರೋಗಗಳು ವಾಸಿಯಾಗುತ್ತವೆ. ಕಷಾಯವನ್ನು ಕರುಳುಬೇನೆಗಳಿಗೂ ಹೆಂಗಸರಿಗೆ ಮುಟ್ಟಿನ ಕಾಲದಲ್ಲಾಗುವ ಅತಿ ರಕ್ತಸ್ರಾವವನ್ನು ನಿಲ್ಲಿಸುವುದಕ್ಕೂ ಉಪಯೋಗಿಸುತ್ತಾರೆ. ಗೆಡ್ಡೆಗಳನ್ನು ಕ್ಷಾಮ ಕಾಲದಲ್ಲಿ ತಿನ್ನುವುದಿದೆ. ಇದರಲ್ಲಿ ಟ್ಯಾನಿನ್, ಕ್ವಿರ್ಟಿಸಿನ್, ವಿಟಮಿನ್ ಇ ಮುಂತಾದ ರಾಸಾಯನಿಕಗಳಿವೆ.
  • ಪೊ. ಫ್ರೂಟಿಕೋಸ ಪ್ರಭೇದವನ್ನು ಮೆರಿನೋ, ಸ್ಟಾಂಗ್‍ಜ, ಪೆನ್ಮ, ಪಿಂಜುಂಗ್ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇದು ಹೆಚ್ಚು ಕವಲೊಡೆದು ಬೆಳೆಯುವ ಪೊದೆ. ಕಾಶ್ಮೀರದಿಂದ ಸಿಕ್ಕಿಮ್‍ವರೆಗಿನ ಹಿಮಾಲಯದಲ್ಲಿ ಬೆಳೆಯುತ್ತದೆ. ಎಲೆಯಲ್ಲಿ 3-7 ಕಿರುಎಲೆಗಳಿವೆ. ಹೂಗಳು ಹಳದಿ ಬಣ್ಣದವು. ಒಣಗಿದ ಎಲೆಗಳನ್ನು ಚಹಾಕ್ಕೆ ಬದಲಾಗಿ ಉಪಯೋಗಿಸುವುದಿದೆ. ಕುರಿ, ದನಕರುಗಳು ಈ ಗಿಡವನ್ನು ತಿನ್ನುತ್ತವೆ. ಇದರಲ್ಲಿ ಪೋಷಕಾಂಶಗಳು ಹೆಚ್ಚು 13% ಪ್ರೋಟೀನ್, 3.5% ಕೊಬ್ಬು, 19.2% ನೀರು, 4.7% ಲವಣ ಹಾಗೂ ಕ್ಯಾರೋಟಿನ್ ವಸ್ತುಗಳು ಇರುವುವು.
  • ಪೊ. ರೆಪ್ಟಾನ್ಸ್ ಪ್ರಭೇದ ಬಹುವಾರ್ಷಿಕ ಪೊದೆ. ಇದು ಕಾಶ್ಮೀರದಲ್ಲಿ ಬಹಳ ಸಾಮಾನ್ಯವಾಗಿ ಕಾಣದೊರೆಯುತ್ತದೆ. ಎಲೆಗಳು ಹಸ್ತಾಕಾರದ ಸಂಯುಕ್ತ ರೂಪಗಳಲ್ಲಿರುತ್ತವೆ. ಹಣ್ಣು ತಿನ್ನಲು ಯೋಗ್ಯ. ಕಷಾಯವನ್ನು ಅತಿಸಾರ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.

ಬಾಹ್ಯ ಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಪೊಟೆಂಟಿಲ್ಲ: Brief Summary ( Kannada )