ಚಿಪ್ಪುಹಂದಿ ಹಂದಿಯಲ್ಲಿ ಒಂದು ವಿಧ. ಇದರ ಮೈಮೇಲೆ ಚಿಪ್ಪು ಇರುವುದರಿಂದ ಇದನ್ನು ಚಿಪ್ಪುಹಂದಿ ಎಂದು ಕರೆಯುತ್ತಾರೆ.[೧]
ಚಿಪ್ಪು ಹಂದಿ ಒಂದು ಸಸ್ತನಿಯಾಗಿದೆ.ಇದನ್ನು ಆಂಗ್ಲ ಭಾಶೆಯಲ್ಲಿ ಪೆಂಗೋಲಿನ್ ಎನ್ನುತ್ತಾರೆ.ಇದರ ಗಾತ್ರ ಸುಮಾರು ೩೦ ರಿಂದ ೧೦೦ ಸೆ.ಮೀ ನವರೆಗೆ ಇರುತ್ತದೆ. ಇವುಗಳಲ್ಲಿ ಕೆಲವು ವರ್ಗಗಳು ಈಗಾಗಲೇ ನಾಶಹೊಂದಿವೆ. ಪೆಂಗೋಲಿನ್ ಎಂಬ ಹೆಸರು ಮಲಯ ಭಾಶೆಯ "ಪೆಂಗ್ಗುಲಿಂಗ್" ಎಂಬ ಪದದಿಂದ ಬಂದಿದೆ. ಇದು ಸಾಮಾನ್ಯವಾಗಿ ಉಶ್ಣವಲಯದ ದೇಶಗಳಾದ ಆಫ್ರಿಕಾ ಮತ್ತು ಏಶ್ಯಾದಲ್ಲಿ ಇವೆ. ಇವುಗಳಿಗೆ ತಮ್ಮ ಚರ್ಮದ ಮೇಲೆ ಅಗಲವಾದ ಚಿಪ್ಪುಗಳಿವೆ.ಇದು ಇವುಗಳ ಮಾತ್ರ ಪ್ರತ್ಯೇಕತೆಯಾಗಿದೆ.ಇವುಗಳು ಮರದ ಪೊತರೆಗಳಲ್ಲಿ ಮತ್ತು ಮಣ್ಣಿನಲ್ಲಿ ಜೀವಿಸುತ್ತವೆ.ಇವುಗಳು ಇರುವೆ ಮತ್ತು ಗೆದ್ದಲುಗಳನ್ನು ತಿಂದು ಬದುಕುತ್ತವೆ.ಇವುಗಳಗೆ ತಮ್ಮ ಆಹಾರವನ್ನು ಸೇವಿಸುವುದಕ್ಕಾಗಿ ಉದ್ದವಾದ ನಾಲಗೆಯಿದೆ.ಇವು ಒಮ್ಮೆಗೆ ೧ ರಿಂದ ೩ ಮರಿಗಳಿಗೆ ಜನ್ಮ ನೀದುತ್ತದೆ. ಅರಣ್ಯನಾಶದಿಂದಾಗಿ ಇವು ಈಗ ನಾಶದ ಅಂಚಿನಲ್ಲಿವೆ.
ಚಿಪ್ಪುಹಂದಿಗಳು ಸಸ್ತನಿಗಳ ವರ್ಗಕ್ಕೆ ಸೇರಿವೆ . ಇವುಗಳ ವೈಜ್ಞಾನಿಕ ಹೆಸರು ಮನಿಸ್ ಒರಿಟ .
"ಮನಿಸ್ ಒರಿಟ"ವನ್ನು ಸಾಮಾನ್ಯವಾಗಿ 'ಚಿಪ್ಪುಗಳುಳ್ಳ ಇರುವೆಭಕ್ಷರು'ಅಥವಾ'ಚಿಪ್ಪುಹಂದಿ' ಎಂದು ಕರೆಯಲಾಗುತ್ತದೆ.ಇವುಗಳು ಬಿಲಗಳಲ್ಲಿ ಹಾಗು ಮರಗಳಲ್ಲಿ ಕಾಣಸಿಗುತ್ತವೆ.
ಚಿಪ್ಪುಹಂದಿ ಹಂದಿಯಲ್ಲಿ ಒಂದು ವಿಧ. ಇದರ ಮೈಮೇಲೆ ಚಿಪ್ಪು ಇರುವುದರಿಂದ ಇದನ್ನು ಚಿಪ್ಪುಹಂದಿ ಎಂದು ಕರೆಯುತ್ತಾರೆ.