dcsimg

ಬೇವು ( Kannada )

provided by wikipedia emerging languages

ಬೇವು(ಒಳ್ಳೆ ಬೇವು) ಭಾರತ ಉಪಖಂಡದ ಮೂಲವಾಸಿ.ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾದ ಮರಗಳಲ್ಲಿ ಒಂದು.ತೀವ್ರ ತರದ ಬರಗಾಲದಲ್ಲಿಯೂ ಬದುಕಿ,ಜನೋಪಯೋಗಿ ಎನಿಸಿದ ಮರ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica)ಎಂಬುದು ಸಸ್ಯಶಾಸ್ತ್ರೀಯ ಹೆಸರು.'ವೆಪ್ಪಮ್' ಎಂದು ತಮಿಳುಭಾಷೆಯಲ್ಲಿ,'ವೇಪ' ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ 'ನೀಮ್'ಎಂದ ಹೆಸರಿದೆ.

ಸಸ್ಯದ ಗುಣಲಕ್ಷಣಗಳು

ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ.ದಟ್ಟವಾದ ಹಂದರ. ತೊಗಟೆ ಸಾದಾರಣ ಮಂದ,ಕರಿಬೂದು ಬಣ್ಣವಿರುತ್ತದೆ.ದಾರುವು ಕೆಂಪು ಕಂದು ಬಣ್ಣವಿದ್ದು,ಸೀಳಿಕೆಗಳಿರುತ್ತವೆ.

ಉಪಯೋಗಗಳು

ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ಉಪಯೋಗಿ.ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.ಗೃಹ ನಿರ್ಮಾಣ, ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ. ತೊಗಟೆಯಿಂದ ಬರುವ ಅಂಟು,ಹೂವು,ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ. ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.

ಔಷಧೀಯ ಗುಣಗಳು

  • ಹಲವು ಶತಮಾನಗಳಿಂದ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಬೇವು ಔಷಧಿಯಾಗಿ ಬಳಕೆಯಾಗುತ್ತಿದೆ.[೩],[೪]
  • ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬೇವು ಸಹಾಯಕ ಎಂದು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.[೫]

ಅಧಾರ ಗ್ರಂಥಗಳು

  1. ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ಉಲ್ಲೇಖಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಬೇವು: Brief Summary ( Kannada )

provided by wikipedia emerging languages

ಬೇವು(ಒಳ್ಳೆ ಬೇವು) ಭಾರತ ಉಪಖಂಡದ ಮೂಲವಾಸಿ.ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾದ ಮರಗಳಲ್ಲಿ ಒಂದು.ತೀವ್ರ ತರದ ಬರಗಾಲದಲ್ಲಿಯೂ ಬದುಕಿ,ಜನೋಪಯೋಗಿ ಎನಿಸಿದ ಮರ.

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು