dcsimg

ಚಕ್ರವಾಕ ( Kannada )

provided by wikipedia emerging languages
A couple of Tadorna ferruginea.jpg
 src=
Tadorna ferruginea

ಚಕ್ರವಾಕ ಪಕ್ಷಿಯು ಅನಾಟಿಡಿ ಕುಟುಂಬದ ಸದಸ್ಯವಾಗಿದೆ. ಇದು ವಿಶಿಷ್ಟ ಲಕ್ಷಣದ ಜಲಪಕ್ಷಿಯಾಗಿದ್ದು, ಇದರ ಉದ್ದ ೫೮ ರಿಂದ ೭೦ ಸೆ.ಮೀ. ಮತ್ತು ರೆಕ್ಕೆಯಗಲ ೧೧೦ರಿಂದ ೧೩೫ ಸೆ.ಮೀ. ಇರುತ್ತದೆ. ಶರೀರದ ಮೇಲೆ ಇದು ಕಿತ್ತಳೆ ಕಂದು ಬಣ್ಣದ ಗರಿಗಳನ್ನು ಹೊಂದಿದ್ದು, ತಲೆ ತಿಳಿ ಬಣ್ಣದ್ದಾಗಿರುತ್ತದೆ. ಬಾಲ ಮತ್ತು ರೆಕ್ಕೆಗಳಲ್ಲಿನ ಹಾರಾಟದ ಗರಿಗಳು ಕಪ್ಪಾಗಿರುತ್ತವೆ ಮತ್ತು ಇದಕ್ಕೆ ವಿರುದ್ಧವಾಗಿ ಗುಪ್ತವಾದ ರೆಕ್ಕೆ ಗರಿಗಳು ಬಿಳಿ ಬಣ್ಣದ್ದಾಗಿರುತ್ತವೆ. ಇದು ವಲಸೆ ಹಕ್ಕಿಯಾಗಿದ್ದು, ಚಳಿಗಾಲಗಳನ್ನು ಭಾರತೀಯ ಉಪಖಂಡದಲ್ಲಿ ಕಳೆಯುತ್ತದೆ ಮತ್ತು ಆಗ್ನೇಯ ಯೂರೋಪ್ ಹಾಗೂ ಮಧ್ಯ ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಉತ್ತರ ಆಫ಼್ರಿಕಾದಲ್ಲಿ ಸಣ್ಣ ಸಂಖ್ಯೆಯಲ್ಲಿ ಚಕ್ರವಾಕಗಳು ನೆಲೆಸಿವೆ. ಇದರ ಕೂಗು ಗಟ್ಟಿಯಾಗಿದೆ (ಕಾರಿನ ಹಾರನ್ನಿನಂತೆ).

ಚಕ್ರವಾಕವು ಬಹುತೇಕವಾಗಿ ಕೆರೆಗಳು, ಜಲಾಶಯಗಳು ಮತ್ತು ನದಿಗಳಂತಹ ಒಳನಾಡಿನ ಜಲಸಮೂಹಗಳಲ್ಲಿ ವಾಸಿಸುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿ ದಂಪತಿಗಳು ಚಿರವಾದ ಬಂಧನವನ್ನು ಹೊಂದಿರುತ್ತವೆ ಮತ್ತು ಗೂಡು ನೀರಿನಿಂದ ಬಹಳಷ್ಟು ದೂರವಿರಬಹುದು, ಕಡಿಬಂಡೆಯಲ್ಲಿನ ಬಿರುಕು ಅಥವಾ ರಂಧ್ರ, ಮರ ಅಥವಾ ಹೋಲುವ ಸ್ಥಳದಲ್ಲಿ. ಸುಮಾರು ಎಂಟು ಮೊಟ್ಟೆಗಳನ್ನು ಇಡಲಾಗುತ್ತದೆ ಮತ್ತು ಕೇವಲ ಹೆಣ್ಣು ಹಕ್ಕಿಯು ಸುಮಾರು ನಾಲ್ಕು ವಾರಗಳು ಮೊಟ್ಟೆಗಳನ್ನು ಮರಿ ಮಾಡುತ್ತದೆ. ಮರಿಗಳನ್ನು ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಪೋಷಿಸುತ್ತವೆ ಮತ್ತು ಹೊರಬಂದ ಮೇಲೆ ಮರಿಗಳು ಸುಮಾರು ಎಂಟು ವಾರಗಳು ಗರಿಗಳನ್ನು ಬರಿಸಿಕೊಳ್ಳುತ್ತವೆ.

ಇದರ ಕೂಗು ಜೋರಾದ, ಮೂಗಿನಿಂದ ಹೊರಡುವ ಸ್ವರವಾಗಿದ್ದು, ಗಂಡು ಮತ್ತು ಹೆಣ್ಣು ಪಕ್ಷಿಗಳು ಹೊರಡಿಸುವ ಕೂಗುಗಳ ನಡುವೆ ವ್ಯತ್ಯಾಸವನ್ನು ಗ್ರಹಿಸುವುದು ಸಾಧ್ಯವಿದೆ. ಚಕ್ರವಾಕವು ನೆಲದ ಮೇಲೆ ಮತ್ತು ಗಾಳಿಯಲ್ಲಿ ಹಾರುತ್ತಿರುವಾಗ ಎರಡೂ ಕಡೆ ಕೂಗುತ್ತದೆ, ಮತ್ತು ಶಬ್ದಗಳು ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತವೆ.[೧]

ಕೊಕ್ಕು ಕಪ್ಪು ಬಣ್ಣದ್ದಾಗಿದೆ ಮತ್ತು ಕಾಲುಗಳು ಗಾಢ ಬೂದು ಬಣ್ಣದ್ದಾಗಿವೆ. ಹೆಣ್ಣು ಗಂಡನ್ನು ಹೋಲುತ್ತದೆ ಆದರೆ ಸ್ವಲ್ಪ ತಿಳಿ ಬಣ್ಣದ, ಬಿಳಿಯಾಗಿರುವ ತಲೆ ಮತ್ತು ಕತ್ತನ್ನು ಹೊಂದಿರುತ್ತದೆ ಮತ್ತು ಕಪ್ಪು ಕತ್ತುಪಟ್ಟಿಯನ್ನು ಹೊಂದಿರುವುದಿಲ್ಲ. ಎರಡೂ ಲಿಂಗಗಳಲ್ಲಿ ಬಣ್ಣಗಳು ಬದಲಾಗುತ್ತವೆ ಮತ್ತು ರೆಕ್ಕೆಗಳು ವಯಸ್ಸಾದಂತೆ ಮಸುಕಾಗುತ್ತವೆ. ಸಂತಾನೋತ್ಪತ್ತಿ ಋತುವಿನ ಕೊನೆಯಲ್ಲಿ ಪಕ್ಷಿಗಳು ಗರಿಗಳನ್ನು ಉದುರಿಸಿಕೊಳ್ಳುತ್ತವೆ ಮತ್ತು ಗಂಡು ತನ್ನ ಕಪ್ಪು ಕತ್ತುಪಟ್ಟಿಯನ್ನು ಕಳೆದುಕೊಳ್ಳುತ್ತದೆ. ಆದರೆ ಡಿಸೆಂಬರ್ ಮತ್ತು ಎಪ್ರಿಲ್ ನಡುವೆ ಮತ್ತೊಂದು ಸುತ್ತಿನ ಗರಿ ಉದುರುವಿಕೆಯಲ್ಲಿ ಈ ಪಟ್ಟಿ ಮತ್ತೆ ಬರುತ್ತದೆ. ಹರೆಯದ ಚಕ್ರವಾಕಗಳು ಹೆಣ್ಣನ್ನು ಹೋಲುತ್ತವೆ ಆದರೆ ಬಣ್ಣ ಕಂದಿನ ಹೆಚ್ಚು ಗಾಢ ಛಾಯೆಯಿರುತ್ತದೆ.

ಉಲ್ಲೇಖಗಳು

  1. Witherby, H. F., ed. (1943). Handbook of British Birds, Volume 3: Hawks to Ducks. H. F. and G. Witherby Ltd. pp. 227–231.
license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಚಕ್ರವಾಕ: Brief Summary ( Kannada )

provided by wikipedia emerging languages
A couple of Tadorna ferruginea.jpg  src= Tadorna ferruginea

ಚಕ್ರವಾಕ ಪಕ್ಷಿಯು ಅನಾಟಿಡಿ ಕುಟುಂಬದ ಸದಸ್ಯವಾಗಿದೆ. ಇದು ವಿಶಿಷ್ಟ ಲಕ್ಷಣದ ಜಲಪಕ್ಷಿಯಾಗಿದ್ದು, ಇದರ ಉದ್ದ ೫೮ ರಿಂದ ೭೦ ಸೆ.ಮೀ. ಮತ್ತು ರೆಕ್ಕೆಯಗಲ ೧೧೦ರಿಂದ ೧೩೫ ಸೆ.ಮೀ. ಇರುತ್ತದೆ. ಶರೀರದ ಮೇಲೆ ಇದು ಕಿತ್ತಳೆ ಕಂದು ಬಣ್ಣದ ಗರಿಗಳನ್ನು ಹೊಂದಿದ್ದು, ತಲೆ ತಿಳಿ ಬಣ್ಣದ್ದಾಗಿರುತ್ತದೆ. ಬಾಲ ಮತ್ತು ರೆಕ್ಕೆಗಳಲ್ಲಿನ ಹಾರಾಟದ ಗರಿಗಳು ಕಪ್ಪಾಗಿರುತ್ತವೆ ಮತ್ತು ಇದಕ್ಕೆ ವಿರುದ್ಧವಾಗಿ ಗುಪ್ತವಾದ ರೆಕ್ಕೆ ಗರಿಗಳು ಬಿಳಿ ಬಣ್ಣದ್ದಾಗಿರುತ್ತವೆ. ಇದು ವಲಸೆ ಹಕ್ಕಿಯಾಗಿದ್ದು, ಚಳಿಗಾಲಗಳನ್ನು ಭಾರತೀಯ ಉಪಖಂಡದಲ್ಲಿ ಕಳೆಯುತ್ತದೆ ಮತ್ತು ಆಗ್ನೇಯ ಯೂರೋಪ್ ಹಾಗೂ ಮಧ್ಯ ಏಷ್ಯಾದಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಉತ್ತರ ಆಫ಼್ರಿಕಾದಲ್ಲಿ ಸಣ್ಣ ಸಂಖ್ಯೆಯಲ್ಲಿ ಚಕ್ರವಾಕಗಳು ನೆಲೆಸಿವೆ. ಇದರ ಕೂಗು ಗಟ್ಟಿಯಾಗಿದೆ (ಕಾರಿನ ಹಾರನ್ನಿನಂತೆ).

ಚಕ್ರವಾಕವು ಬಹುತೇಕವಾಗಿ ಕೆರೆಗಳು, ಜಲಾಶಯಗಳು ಮತ್ತು ನದಿಗಳಂತಹ ಒಳನಾಡಿನ ಜಲಸಮೂಹಗಳಲ್ಲಿ ವಾಸಿಸುತ್ತದೆ. ಗಂಡು ಮತ್ತು ಹೆಣ್ಣು ಹಕ್ಕಿ ದಂಪತಿಗಳು ಚಿರವಾದ ಬಂಧನವನ್ನು ಹೊಂದಿರುತ್ತವೆ ಮತ್ತು ಗೂಡು ನೀರಿನಿಂದ ಬಹಳಷ್ಟು ದೂರವಿರಬಹುದು, ಕಡಿಬಂಡೆಯಲ್ಲಿನ ಬಿರುಕು ಅಥವಾ ರಂಧ್ರ, ಮರ ಅಥವಾ ಹೋಲುವ ಸ್ಥಳದಲ್ಲಿ. ಸುಮಾರು ಎಂಟು ಮೊಟ್ಟೆಗಳನ್ನು ಇಡಲಾಗುತ್ತದೆ ಮತ್ತು ಕೇವಲ ಹೆಣ್ಣು ಹಕ್ಕಿಯು ಸುಮಾರು ನಾಲ್ಕು ವಾರಗಳು ಮೊಟ್ಟೆಗಳನ್ನು ಮರಿ ಮಾಡುತ್ತದೆ. ಮರಿಗಳನ್ನು ಗಂಡು ಮತ್ತು ಹೆಣ್ಣು ಎರಡೂ ಹಕ್ಕಿಗಳು ಪೋಷಿಸುತ್ತವೆ ಮತ್ತು ಹೊರಬಂದ ಮೇಲೆ ಮರಿಗಳು ಸುಮಾರು ಎಂಟು ವಾರಗಳು ಗರಿಗಳನ್ನು ಬರಿಸಿಕೊಳ್ಳುತ್ತವೆ.

ಇದರ ಕೂಗು ಜೋರಾದ, ಮೂಗಿನಿಂದ ಹೊರಡುವ ಸ್ವರವಾಗಿದ್ದು, ಗಂಡು ಮತ್ತು ಹೆಣ್ಣು ಪಕ್ಷಿಗಳು ಹೊರಡಿಸುವ ಕೂಗುಗಳ ನಡುವೆ ವ್ಯತ್ಯಾಸವನ್ನು ಗ್ರಹಿಸುವುದು ಸಾಧ್ಯವಿದೆ. ಚಕ್ರವಾಕವು ನೆಲದ ಮೇಲೆ ಮತ್ತು ಗಾಳಿಯಲ್ಲಿ ಹಾರುತ್ತಿರುವಾಗ ಎರಡೂ ಕಡೆ ಕೂಗುತ್ತದೆ, ಮತ್ತು ಶಬ್ದಗಳು ಸಂದರ್ಭಗಳಿಗೆ ಅನುಗುಣವಾಗಿ ಬದಲಾಗುತ್ತವೆ.