dcsimg

ಎಲಚಿ ( Kannada )

provided by wikipedia emerging languages
 src=
Ziziphus zizyphus - MHNT

ಎಲಚಿ: ರ್ಯಾಮ್ನೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವೃಕ್ಷ ಜಾತಿಯ ಸಸ್ಯ (ಝಿಝಿಫಸ್ ಜುಜೂಬ), ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ ಬ್ಹೇರ್ ಫ್ರೂಟ್ ಟ್ರೀ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಬೋರೆ ಎಂಬ ಹೆಸರೂ ಉಂಟು. ಇದು ಭಾರತ, ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕ, ಚೀನ, ಆಫ್ಘಾನಿಸ್ತಾನ, ಆಸ್ಟ್ರೇಲಿಯ, ಆಫ್ರಿಕ ಗಳಲ್ಲಿ ಹರಡಿದೆ. ಹುಲ್ಲುಗಾವಲು, ಒಣಬಂಜರು ನೆಲಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗೂ ಹಣ್ಣುಗಳಿಗಾಗೂ ಬೆಳೆಸುತ್ತಾರೆ.

ಲಕ್ಷಣಗಳು

ಎಲಚಿ ಮರ 10-15ಮೀ. ಎತ್ತರಕ್ಕೆ ಬೆಳೆಯುವ ಕುಳ್ಳು ಕಾಂಡದ ಮಧ್ಯಮ ಪ್ರಮಾಣದ ವೃಕ್ಷ. ಕಾಂಡ ಕಪ್ಪುಬಣ್ಣದ ತೊಗಟೆಯಿಂದ ಆವೃತ ವಾಗಿದೆ. ತೊಗಟೆಯ ಮೇಲ್ಗಡೆ ಸೀಳಿಕೆ ಗಳಿದ್ದು ಒಳಭಾಗ ಕೆಂಪಾಗಿರುತ್ತದೆ. ರೆಂಬೆಗಳು ತೂಗು ಬಿದ್ದಿರುತ್ತವೆ. ಪುಷ್ಯ ಪತ್ರಗಳು (ಸ್ಟಿಪ್ಯುಲ್ಸ್‌) ಮುಳ್ಳುಗಳಾಗಿ ಮಾರ್ಪಟ್ಟು ಒಂದು ನೆಟ್ಟಗೂ ಇನ್ನೊಂದು ಇಳಿಮುಖವಾಗಿಯೂ ಇವೆ. ಸುಮಾರು ಚಕ್ರಾಕಾರವಾಗಿ ಮೂರು ನರಗಳುಳ್ಳ ಎಲೆಗಳ ಕೆಳಭಾಗದಲ್ಲಿ ಬಿಳಿಗೂದಲುಗಳಿವೆ. ಹೂಗಳು ಸಣ್ಣವಾಗಿ ಹಸಿರು. ಹಳದಿ ಬಣ್ಣದಿಂದ ಕೂಡಿದ್ದು ಎಲೆ ಕಂಕುಳ ನಡುವೆ ಮಧ್ಯಾರಂಭಿ ಗೊಂಚಲುಗಳಲ್ಲಿ (ಸೈಮ್ಸ್‌) ಕಾಣಬರುತ್ತವೆ. ಹಣ್ಣಗಳು ದುಂಡಾಗಿ ಕಿತ್ತಳೆ ಅಥವಾ ಕೆಂಪು ಬಣ್ಣದಿಂದ ಕೂಡಿದ ಅಷ್ಟಿಫಲಗಳು, ಒಳ ಓಟೆ ಬಹುಗಟ್ಟಿ. ರಾಯ ಬೋರೆ ಎಂಬ ಒಂದು ಜಾತಿ ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಕೊಡುತ್ತದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

license
cc-by-sa-3.0
copyright
ವಿಕಿಪೀಡಿಯ ಲೇಖಕರು ಮತ್ತು ಸಂಪಾದಕರು

ಎಲಚಿ: Brief Summary ( Kannada )

provided by wikipedia emerging languages
 src= Ziziphus zizyphus - MHNT